ಉಡುಪಿ: ದಿಲ್ಲಿಯಲ್ಲಿ ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ 80 ಬಡಗಬೆಟ್ಟು ಗ್ರಾ.ಪಂ. ಅಧ್ಯಕ್ಷ ಕೇಶವ ಕೋಟ್ಯಾನ್ ಅವರನ್ನು ಆಹ್ವಾನಿಸಲಾಗಿದೆ.
ಜಲಜೀವನ್ ಮಿಷನ್ ಯೋಜನೆಯಡಿ ವಿಡಬ್ಯುಎಸ್‌ಸಿ ಸಮಿತಿಯ ಓರ್ವ ಸದಸ್ಯರನ್ನು ನಿಯೋಜಿಸುವಂತೆ ಕೋರಲಾಗಿತ್ತು. ಅದರಂತೆ ಜಲಜೀವನ್ ಮಿಷನ್ ಯೋಜನೆಯಡಿ ಉತ್ತಮವಾಗಿ ಕಾರ್ಯನಿರ್ವಹಿಸಿ, ಹರ್ ಘರ್ ಜಲ್ ಎಂದು ಘೋಷಿಸಿದ ಗ್ರಾಮಗಳ ಪೈಕಿ, ಮುಖ್ಯವಾಗಿ ಕಾರ್ಯಾಚರಣೆ ಮತ್ತು ನಿರ್ವಹಣೆ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಗ್ರಾಮದ ನೀರು ಮತ್ತು ನೈರ್ಮಲ್ಯ ಸಮಿತಿಯ ಒಬ್ಬ ಸದಸ್ಯ ಜತೆಗೆ ಅವರ ಕುಟುಂಬದ ಒಬ್ಬರನ್ನು ಆಯ್ಕೆ ಮಾಡಲಾಗಿದ್ದು, ಅದರಂತೆ ಕೇಶವ ಕೋಟ್ಯಾನ್ ಆಯ್ಕೆ ನಡೆದಿದೆ.
Kshetra Samachara
13/01/2025 08:04 pm