ಮುಲ್ಕಿ: ತಾಲೂಕು ಭೂ ಸುರಕ್ಷಾ ಯೋಜನೆಯಡಿ ಕಂದಾಯ ದಾಖಲೆಗಳನ್ನು ಗಣಕೀಕರಣಗೊಳಿಸುವ ಸಂಬಂಧ ಅಭಿಲೇಖಾಲಯಗಳ ಗಣಕೀಕರಣದ ಉದ್ಘಾಟನೆಯನ್ನು ತಾಲೂಕಿನ ಬಪ್ಪನಾಡು ಹಳೆ ನಾಡಕಚೇರಿ ಕಟ್ಟಡದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ನೆರವೇರಿಸಿದರು.
ಈ ಸಂದರ್ಭ ಅವರು ಮಾತನಾಡಿ ರಾಜ್ಯ ಸರ್ಕಾರದ ಸೂಚನೆಯಂತೆ ತಾಲೂಕು ವ್ಯಾಪ್ತಿಯ ಕಂದಾಯ ಇಲಾಖೆಯ ಕಡತಗಳನ್ನು ಗಣಕೀಕರಣ ಮಾಡುವ ಮೂಲಕ ಹಳೆಯ ದಾಖಲೆಗಳನ್ನು ಸಾಮಾನ್ಯ ಜನರಿಗೆ ಕೈಗೆಟಕುವ ದೃಷ್ಟಿಯಲ್ಲಿ ಕ್ರಮ ಕೈಗೊಳ್ಳಲಾಗಿದ್ದು ಶೀಘ್ರ ಚಾಲ್ತಿಗೆ ಬರಲಿದೆ ಎಂದರು. ಅವರು ಮಾತನಾಡಿ ಬಹುಕೋಟಿ ವೆಚ್ಚದ ಮುಲ್ಕಿ ತಾಲೂಕು ಆಡಳಿತ ಸೌಧದ ಕಾಮಗಾರಿ ಮುಗಿದಿದ್ದು ಶೀಘ್ರ ಲೋಕಾರ್ಪಣೆ ನಡೆಯಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ತಾಲೂಕು ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ವಹಿಸಿ ಶಾಸಕರಿಗೆ ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸತೀಶ್ ಅಂಚನ್, ಮುಖ್ಯಾಧಿಕಾರಿ ಮಧುಕರ್, ಸದಸ್ಯರಾದ ಸುಭಾಶ್ ಶೆಟ್ಟಿ, ಭೀಮಾಶಂಕರ್, ಶೈಲೇಶ್ ಕುಮಾರ್, ಉಪ ತಹಶಿಲ್ದಾರ್ ದಿಲೀಪ್ ರೋಡ್ಕರ್, ಪ್ರಭಾರ ಕಂದಾಯ ಅಧಿಕಾರಿ ಮೋಹನ್, ವಿ ಎ ಸುಜಿತ್, ಸ್ಥಳೀಯರಾದ ಹರಿಶ್ಚಂದ್ರ ಕೆ.ಎಸ್. ರಾವ್ ನಗರ ಮತ್ತಿತರರು ಉಪಸ್ಥಿತರಿದ್ದರು.
PublicNext
13/01/2025 05:12 pm