ಮಂಗಳೂರು: ಚಾಮರಾಜಪೇಟೆಯಲ್ಲಿ ಗೋವುಗಳ ಕೆಚ್ಚಲು ಕಡಿದು ಕ್ರೌರ್ಯ ಮೆರೆದ ಘಟನೆಯನ್ನು ವಿರೋಧಿಸಿ ಮಂಗಳೂರಿನ ಕ್ಲಾಕ್ ಟವರ್ ಮುಂಭಾಗ ಬಿಜೆಪಿ ಪ್ರತಿಭಟನೆ ನಡೆಸಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಂಎಲ್‌ಸಿ ರವಿಕುಮಾರ್, ರಾಜ್ಯದಲ್ಲಿ ಗೋವುಗಳ ರಕ್ಷಣೆ ಮಾಡಲಾಗದ ರಾಜ್ಯ ಸರಕಾರ, ಟಿಪ್ಪು ಸುಲ್ತಾನ್ ನ ಮಾನಸಿಕತೆ ಹೊಂದಿದೆ. ಈ ಘಟನೆಯಿಂದ ಮಾನವ ಸಮಾಜ ತಲೆ ಎತ್ತಲು ಸಾಧ್ಯವಿಲ್ಲದಂತಾಗಿದೆ. ಘಟನೆಗೆ ಸಂಬಂಧಿಸಿದಂತೆ ಉತ್ತರ ಭಾರತದ ಓರ್ವನನ್ನು ಬಂಧಿಸಲಾಗಿದೆ. ಆದರೆ, ಕೃತ್ಯ ಎಸಗಿದ್ದು ಆತನೇ ಎಂಬುದಕ್ಕೆ ಸಾಕ್ಷಿ ಏನು? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಘಟನೆಯಲ್ಲಿ ಶಾಮೀಲಾಗಿರುವ ಎಲ್ಲರನ್ನೂ ಪೊಲೀಸರು ಬಂಧಿಸಲಿ. ರಾಜ್ಯದಲ್ಲಿ ಗೋವುಗಳಿಗೂ ರಕ್ಷಣೆಯಿಲ್ಲ, ಜನರಿಗೂ ರಕ್ಷಣೆಯಿಲ್ಲ. ಜನರಿಗೆ, ಗೋವುಗಳಿಗೆ ರಕ್ಷಣೆ ನೀಡಲು ಸಾಧ್ಯವಿಲ್ಲವೆಂದಾದರೆ ಸಿಎಂ ಸಿದ್ದರಾಮಯ್ಯ ಈ ತಕ್ಷಣ ರಾಜೀನಾಮೆ ನೀಡಲಿ. ಅಲ್ಲದೆ, ಕೆಚ್ಚಲನ್ನು ಕತ್ತರಿಸಿದ ಗೋವುಗಳನ್ನು ಸಾಕಿದ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಬೇಕು ರವಿಕುಮಾರ್ ಆಗ್ರಹಿಸಿದರು.
PublicNext
13/01/2025 10:28 pm