ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕರ್ನಾಟಕದಲ್ಲಿ ನಡೆದಿರುವುದು ಪೈಶಾಚಿಕ ಕೃತ್ಯ - ಪೇಜಾವರ ಶ್ರೀ ಖಂಡನೆ

ಉಡುಪಿ : ಕರ್ನಾಟಕದ ಚಾಮರಾಜನಗರದಲ್ಲಿ ನಡೆದಿರುವುದು ಅತ್ಯಂತ ವೈಶಾಚಿಕ ಮತ್ತು ಹೇಯ ಕೃತ್ಯ. ಇಂತಹ ಘಟನೆಗಳು ಮುಂದೊಂದೂ ನಡೆಯಬಾರದು.ಈ ಘಟನೆಯನ್ನು ಖಂಡಿಸುವುದರೊಂದಿಗೆ ಅಪರಾಧಿಗೆ ಗರಿಷ್ಠ ಪ್ರಮಾಣದ ಶಿಕ್ಷೆ ಆಗಬೇಕು ಎಂದು ಪೇಜಾವರ ವಿಶ್ವ ಪ್ರಸನ್ನ ತೀರ್ಥ ಶ್ರೀಗಳು ಆಗ್ರಹಿಸಿದ್ದಾರೆ.

ಗೋವನ್ನು ನಾವು ಪ್ರತಿನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಅದರ ಪ್ರಯೋಜನ ಪಡೆಯುತ್ತೇವೆ. ಇಂತಹ ಗೋವುಗಳನ್ನು ಪ್ರತಿಭಟನೆಗೆ ಬಳಸಿದರು ಎಂಬ ಕಾರಣಕ್ಕೆ ದುಷ್ಕರ್ಮಿಗಳು ಅದರ ಕೆಚ್ಚಲನ್ನೇ ಕುಯ್ದಿರುವುದು ಅತ್ಯಂತ ನೀಚ ಕೃತ್ಯ. ಇದನ್ನು ಖಂಡಿಸುತ್ತೇವೆ. ಸರಕಾರ ಆರೋಪಿಗೆ ಗರಿಷ್ಠ ಪ್ರಮಾಣದ ಶಿಕ್ಷೆ ನೀಡಬೇಕು. ಇಲ್ಲದಿದ್ದಲ್ಲಿ ನಾವೇ ಹೋರಾಟ ಮಾಡಬೇಕಾದೀರು ಎಂದು ಪೇಜಾವರ ಶ್ರೀಗಳು ಒತ್ತಾಯ ಮಾಡಿದ್ದಾರೆ.

Edited By : Ashok M
PublicNext

PublicNext

13/01/2025 04:58 pm

Cinque Terre

20.71 K

Cinque Terre

0

ಸಂಬಂಧಿತ ಸುದ್ದಿ