ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹಸುವಿನ‌ ಕೆಚ್ಚಲು ಕೊಯ್ದ ಪ್ರಕರಣ- "ಜಮೀರ್ ಬ್ರಿಗೇಡ್ ನಿಂದ ಈ ಕೃತ್ಯ ನಡೆದಿದೆ" ಎಂದ ಭಾಸ್ಕರ ರಾವ್

ಬೆಂಗಳೂರು: ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕೊಯ್ದ ಪ್ರಕರಣದಲ್ಲಿ ಸಚಿವ ಜಮೀರ್ ಅಹಮದ್ ಬ್ರಿಗೇಡ್ ಕೈವಾಡವಿದೆ ಎಂದು ಬಿಜೆಪಿ ಮುಖಂಡ, ಮಾಜಿ IPS ಅಧಿಕಾರಿ ಭಾಸ್ಕರ್ ರಾವ್ ಹೇಳಿದ್ದಾರೆ. ಈ ಕುರಿತಂತೆ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ದೇಶದಲ್ಲಿ ಎಲ್ಲಿಯೂ ಆಗದಿರುವ ಘಟನೆ ನಿನ್ನೆ ನಮ್ಮ‌ಚಾಮರಾಜ ಪೇಟೆಯಲ್ಲಿ ನಡೆದಿದೆ. ಇದೊಂದು ಷಡ್ಯಂತ್ರ. ಚಾಮರಾಜಪೇಟೆಯಲ್ಲಿ ಕಡಿಮೆ‌ ಸಂಖ್ಯೆಯಲ್ಲಿರುವ ಹಿಂದೂಗಳನ್ನ ಓಡಿಸಲು ಷಡ್ಯಂತ್ರ ಎಂದು ಆರೋಪಿಸಿದರು.

ಸಚಿವ ಜಮೀರ್ ಮೂರು ಹಸು ಕೊಡಿಸ್ತೀನಿ ಅಂದಿದ್ದಾರೆ. ಅವರಿಗೆ ಭಾವನೆಯೇ ಇಲ್ಲ! ಅದೇನು ಆಟದ ವಸ್ತುವಾ? ನಾವು ತಾಳ್ಮೆಯಿಂದ ಇರುವ ಕಾರಣ ರಕ್ತಪಾತ ಆಗಿಲ್ಲ. ರಾಜ್ಯ ಸರ್ಕಾರದ ಅದೃಷ್ಟ ಇದು ಎಂದರು.

ನಿನ್ನೆ ನಡೆದ ಘಟನೆಗೆ ಸಚಿವ ಜಮೀರ್ ಅಹಮದ್ ನೇರ ಕಾರಣ. ಜಮೀರ್ ಕೊಡುವ ಹಣದ ಹಿಂದೆ ಕಾಂಗ್ರೆಸ್ ನವರು ಹೋಗ್ತಾರೆ ಅಷ್ಟೇ. ಪ್ರಕರಣ ಮುಚ್ಚಿಹಾಕಲು ಬಿಹಾರ ಮೂಲದ ವ್ಯಕ್ತಿಯನ್ನ ಬಂಧಿಸಿದ್ದಾರೆ. ಇಲ್ಲಿ ಡ್ರಗ್ಸ್ ದಂಧೆ ವ್ಯಾಪಕವಾಗಿ ನಡೆಯುತ್ತಿದೆ. ಜಮೀರ್ ಅಹಮದ್ ಮಾಡುತ್ತಿರುವ ಈ ಕೆಲಸವನ್ನ ಮುಸ್ಲಿಮರೇ ಮೆಚ್ಚೋದಿಲ್ಲ. ಮುಸ್ಲಿಮರಲ್ಲಿ ಒಳ್ಳೆಯವರಿದ್ದಾರೆ. ಆದ್ರೆ, ನಾಯಕತ್ವ ಪ್ರಶ್ನಿಸುತ್ತಿದ್ದೇನೆ ಎಂದು ಜಮೀರ್ ವಿರುದ್ಧ ಕಿಡಿ ಕಾರಿದ್ರು.

ಈ ಪ್ರಕರಣದಲ್ಲಿ ಎಫ್ ಐಆರ್ ಕೂಡ ಸರಿಯಾಗಿ ಹಾಕಿಲ್ಲ! ಅಮಾಯಕನನ್ನ ಕರೆದು ತಂದು ಕೂರಿಸಿದ್ದಾರೆ. ಹಸು ಸಾಕಿದವರನ್ನ ಓಡಿಸಲು, ಪಶು ಆಸ್ಪತ್ರೆ ಕಬಳಿಸಲು ಈ ತಂತ್ರ ಅಷ್ಟೇ. ಸಾವಿರ ಗೋವುಗಳನ್ನು ತಂದು ಕೊಟ್ಟರೂ ಮಾಡಿದ ಪಾಪ ತೊಳೆದುಕೊಳ್ಳಲು ಸಾಧ್ಯವಿಲ್ಲ ಎಂದರು.

ಚಾಮರಾಜಪೇಟೆಯಲ್ಲಿ ಸಿಸಿ ಟಿವಿ ಹೆಚ್ಚು ಅಳವಡಿಸಬೇಕು, ಪಶು ಆಸ್ಪತ್ರೆ ಮುಂದುವರೆಸಲು ಕ್ರಮ ತೆಗೆದುಕೊಳ್ಳಬೇಕು, ಅಲ್ದೇ ಕೆಚ್ಚಲು ಕೊಯ್ದ ಪ್ರಕರಣದಲ್ಲಿ ಅಮಾಯಕನನ್ನ ಬಂಧಿಸಿದ್ದಾರೆ. ನಿಜವಾದ ಆರೋಪಿಯನ್ನ ಬಂಧಿಸಬೇಕು ಎಂದು ಆಗ್ರಹಿಸಿದರು.

ಹೀಗೆ ಜಮೀರ್ ಅಹಮದ್ ಬಾಲ ಬಿಚ್ಚೋಕೆ ಸಿಎಂ ಸಿದ್ದರಾಮಯ್ಯ ಕಾರಣ. ಜಮೀರ್ ಕಲ್ಲು ಎಸೆಯೋರು, ಬೆಂಕಿ ಹಚ್ಚೋ ಹುಡುಗರನ್ನ ರೆಡಿ ಮಾಡ್ತಿದಾರೆ. ಜಯನಗರ, ಬಿಟಿಎಂ ಎಲ್ಲೂ ನಡೆಯದ ಘಟನೆ ಚಾಮರಾಜನಗರದಲ್ಲಿ ಏಕೆ ನಡೆಯುತ್ತೆ !?

ಜಮೀರ್ ಬ್ರಿಗೇಡ್ ನಿಂದಲೇ ಈ ಎಲ್ಲ ಕೃತ್ಯ ನಡೀತಾ ಇದೆ. ಮುಸ್ಲಿಂ ಗೆಳೆಯರು ನನಗೆ ಕಾಲ್ ಮಾಡಿದ್ರು,

ಇಂತಹ ಕೃತ್ಯವನ್ನ ನಾವು ಕೂಡ ಸಹಿಸಲ್ಲ, ಬೆಂಬಲಿಸಲ್ಲ ಎಂದ್ರು. ಆದ್ರೆ, ಈ ಜಮೀರ್ ಬ್ರಿಗೇಡ್ ಇದೆಲ್ಲ ಮಾಡ್ತಿದೆ ಎಂದು ಹರಿಹಾಯ್ದರು.

Edited By : Suman K
PublicNext

PublicNext

13/01/2025 04:30 pm

Cinque Terre

20.2 K

Cinque Terre

0