ಕುಂದಾಪುರ: ಚಾಲಕನೇ ಇಲ್ಲದೆ ಬಸ್ಸೊಂದು ರಸ್ತೆ ದಾಟಿ ಬಂದು ಕಾರೊಂದಕ್ಕೆ ಡಿಕ್ಕಿ ಹೊಡೆದ ಘಟನೆ ಕುಂದಾಪುರದ ಹಂಗಳೂರು ಸಮೀಪ ಸಂಭವಿಸಿದೆ.ಘಟನೆಯಲ್ಲಿ ಕಾರೊಂದು ಜಖಂಗೊಂಡಿದ್ದು ಯಾರಿಗೂ ಗಾಯಗಳಾಗಿಲ್ಲ. ಸರ್ವಿಸ್ ಸೆಂಟರ್ ನಲ್ಲಿದ್ದ ಖಾಸಗಿ ಬಸ್ , ಎರಡು ಸರ್ವಿಸ್ ರಸ್ತೆ ಮತ್ತು ರಾಷ್ಟ್ರೀಯ ಹೆದ್ದಾರಿ ದಾಟಿ ಬಂದಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಏಕಾಏಕಿ ಚಲಿಸಿದ ಬಸ್ ಕಂಡು ಸಾರ್ವಜನಿಕರು ಗಾಬರಿಗೊಂಡಿದ್ದಾರೆ.
ರಸ್ತೆ ದಾಟಿ ಬಂದ ಬಸ್ ಪಾರ್ಕ್ ಮಾಡಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಷಾತ್ ಸಾರ್ವಜನಿಕರು ಮತ್ತು ಇತರ ವಾಹನಗಳು ಪಾರಾಗಿವೆ. ಈ ಕುರಿತ ಸಿಸಿ ಕ್ಯಾಮೆರಾ ಫೂಟೇಜ್ ವೈರಲ್ ಆಗುತ್ತಿದೆ.
PublicNext
13/01/2025 03:49 pm