ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಪಿಸ್ತ ಸಿಪ್ಪೆ ಗಂಟಲಲ್ಲಿ ಸಿಲುಕಿ ಮಗು ಸಾವು

ಮಂಗಳೂರು : ಪಿಸ್ತ ಸಿಪ್ಪೆ ಗಂಟಲಲ್ಲಿ ಸಿಲುಕಿ ಮಗುವೊಂದು ಮೃತಪಟ್ಟ ಹೃದಯವಿದ್ರಾವಕ ಘಟನೆ ನಡೆದಿದೆ. ಕಾಸರಗೋಡು ಜಿಲ್ಲೆಯ ಕುಂಬಳೆಯ ಭಾಸ್ಕರ ನಗರ ನಿವಾಸಿ ಅನ್ವರ್ ಮಹರೂಫಾ ದಂಪತಿಗಳ ಪುತ್ರ ಎರಡೂವರೆ ವರ್ಷದ ಅನಸ್ ಮೃತಪಟ್ಟ ಮಗು

ಅನಸ್ ಪಿಸ್ತಾ ತಿನ್ನುತ್ತಿದ್ದ ವೇಳೆ ಅದರ ಸಿಪ್ಪೆಯನ್ನೂ ತಿಂದಿದ್ದಾನೆ. ಇದರಿಂದ ಸಿಪ್ಪೆ ಮಗುವಿನ ಗಂಟಲಲ್ಲಿ ಸಿಲುಕಿದೆ‌. ತಕ್ಷಣ ಪಿಸ್ತ ಸಿಪ್ಪೆಯನ್ನು ಮಗುವಿನ ಬಾಯಿಯಿಂದ ಹೆತ್ತವರು ಹೊರ ತೆಗೆದಿದ್ದಾರೆ. ಬಳಿಕ ತಕ್ಷಣವೇ ಉಪ್ಪಳದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆಸ್ಪತ್ರೆಯಲ್ಲಿ ಪರಿಶೀಲಿಸಿದ ವೈದ್ಯರು ಗಂಟಲಿನಲ್ಲಿ ಯಾವುದೇ ವಸ್ತು ಇಲ್ಲ ಎಂದು ತಿಳಿಸಿದ್ದರು

ಆದ್ದರಿಂದ ಮಗುವನ್ನು ಮನೆಗೆ ಕರೆತರಲಾಗಿತ್ತು. ಆದರೆ ಆ ಬಳಿಕ ಮಗುವಿಗೆ ಉಸಿರಾಟದ ತೊಂದರೆ ಕಂಡುಬಂದಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಕರೆತರುವ ದಾರಿ ಮಧ್ಯೆಯೇ ಮಗು ಮೃತಪಟ್ಟಿದೆ. ಮಗುವಿನ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.

Edited By : Nirmala Aralikatti
PublicNext

PublicNext

13/01/2025 03:36 pm

Cinque Terre

22.93 K

Cinque Terre

2