ಬೆಳಗಾವಿ : ಯಲ್ಲಮ್ಮ ಗುಡ್ಡ, ಶಬರಿ ಕೊಳ್ಳ, ವಂದೇ ಭಾರತದ ಬಗ್ಗೆ ಮನವಿ ಸಲ್ಲಿಸಿದ್ದೇನೆ. ರೈಲ್ವೇ ಸಚಿವರಿಗೆ ಹಲವು ಸಲ ಭೇಟಿಯಾದ್ರು ವಂದೇ ಭಾರತ ರೈಲು ಬೆಳಗಾವಿಗೆ ವಿಸ್ತರಣೆ ಆಗಿಲ್ಲ. ನೀವು ಮಧ್ಯೆ ಪ್ರವೇಶ ಮಾಡಬೇಕು ಎಂದು ಪ್ರಧಾನಿ ಮೋದಿ ಅವರ ಬಳಿ ಮನವಿ ಮಾಡಿದ್ದೇನೆ ಎಂದು ಸಂಸದ ಜಗದೀಶ್ ಶೆಟ್ಟರ್ ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಲೋಕಾಪುರ ರೈಲು ವಿಸ್ತರಣೆ ಮಾಡಲು ಸೂಚನೆ ಕೊಡಿ ಎಂದು ಹೇಳಿದ್ದೇನೆ. ಉಡಾನ್ ಯೋಜನೆ ಮುಂದುವರಿಸಬೇಕು ಎಂದು ಮನವಿ ಮಾಡಿದ್ದಾನೆ. ಇದರಿಂದ ಬಡವರು, ಮಧ್ಯಮ ವರ್ಗದವರು ವಿಮಾನದಲ್ಲಿ ಓಡಾಡಲು ಅನಕೂಲ ಆಗಿದೆ. ಒಳ್ಳೆಯ ಚರ್ಚೆ ನಡೆದಿದೆ, ನನಗೆ ಅವರು ಗೌರವ ಕೊಟ್ಟರು ಎಂದರು.
ಸಿ ಟಿ ರವಿಗೆ ಕೊಲೆ ಬೆದರಿಕೆ ಬಂದಿರುವ ವಿಚಾರವಾಗಿ ಮಾತನಾಡಿದ ಅವರು, ಸಿ ಟಿ ರವಿಯನ್ನು ಟಾರ್ಗೆಟ್ ಮಾಡಿ ಮುಗಿಸುವ ಷಡ್ಯಂತ್ರ ನಡೆದಿದೆ. ಹಿಂದುತ್ವದ ಬಗ್ಗೆ ಹೋರಾಟ ಮಾಡುವ ವ್ಯಕ್ತಿ ಸಿ ಟಿ ರವಿ ಅವರದ್ದು, ವಿಧಾನ ಪರಿಷತ್ ನಲ್ಲಿ ನಡೆದ ಘಟನೆ ಇದು ತನಿಖೆ ನಡೆಯುತ್ತಿದೆ. ಬಂಧನ ಮಾಡಲು ಬರಲ್ಲ, ಕಾನೂನು ಬಾಹಿರವಾಗಿ ಬಂಧನ ಮಾಡಿದ್ರು.
ಇನ್ನೂ ರಾಜ್ಯ ಸರ್ಕಾರಕ್ಕೆ ಬುದ್ದಿ ಬಂದಿಲ್ಲ. ಓಪನ್ ಆಗಿ ಲೆಟರ್ ಬರ್ತಿರಾ ಅಂದ್ರೆ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಪೊಲೀಸರು ಸರ್ಕಾರದ ಏಜೆಂಟ್ ಆಗಿ ವರ್ತನೆ ಮಾಡುತ್ತಿದ್ದಾರೆ. ಗುಂಡಾ ಸಂಸ್ಕೃತಿಯನ್ನು ನಾವು ವಿರೋಧ ಮಾಡ್ತಿವಿ. ಪತ್ರ ಬರೆದವರು ಹಾಗೂ ಸುವರ್ಣ ಸೌಧದಲ್ಲಿ ಗುಂಡಾಗಿರಿ ಮಾಡಿದವರನ್ನು ಮೊದಲು ಬಂಧಿಸವೇಕು ಎಂದು ಆಗ್ರಹಿಸಿದರು.
PublicNext
12/01/2025 10:05 pm