ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮರವೂರು ನದಿಗೆ ಬಿದ್ದು ಮಹಿಳೆ ಮೃತ್ಯು

ಮಂಗಳೂರು: ನಗರದ ಮರವೂರು ಬಳಿಯ ಸೇತುವೆಯ ಬದಿಯಲ್ಲಿ ನದಿಗೆ ಬಿದ್ದು ಮಹಿಳೆಯೊಬ್ಬರು‌ ಮೃತಪಟ್ಟ ಘಟನೆ ರವಿವಾರ ಬೆಳಗ್ಗೆ ನಡೆದಿದೆ. ಕುಂಜತ್ತಬೈಲು ನಿವಾಸಿ ರೇವತಿ(60) ಮೃತಪಟ್ಟವರು.

ರವಿವಾರ ಬೆಳಗ್ಗೆ 7.30ಯಿಂದ 8.30ಸುಮಾರಿಗೆ ರೇವತಿಯವರು ಮನೆಯಿಂದ ಅಂಗಡಿಗೆಂದು ಹೊರಟಿದ್ದರು. ದಾರಿ ಮಧ್ಯೆ ಯಾವುದೋ ಕಾರಣಕ್ಕೆ ಮರವೂರು ಬಳಿಯ ಸೇತುವೆಯ ಬದಿಯಿಂದ ನದಿಯತ್ತ ಬಂದಿದ್ದಾರೆ. ಆಗ ಆಕಸ್ಮಿಕವಾಗಿ ನದಿಗೆ ಬಿದ್ದು ಅವರು ಮೃತಪಟ್ಟಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ರೇವತಿಯವರ ಮೃತದೇಹವನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಾವೂರು ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದ ವೇಳೆ ಮನೆಯವರು ಅಂಗಡಿಗೆ ಬಂದ ರೇವತಿಯವರು ಮರಳಿ‌ಮನೆಗೆ ಬಂದಿಲ್ಲವೆಂದು ಹುಡುಕಾಡುತ್ತ ಸ್ಥಳಕ್ಕೆ ಬಂದಿದ್ದಾರೆ. ಮೃತದೇಹವನ್ನು ಗಮನಿಸಿದ ಅವರ ಪುತ್ರ ತಮ್ಮ ತಾಯಿಯದ್ದೇ ಮೃತದೇಹವೆಂದು ಗುರುತು ಪತ್ತೆ ಹಚ್ಚಿದ್ದಾರೆ. ಬಳಿಕ ಮೃತದೇಹವನ್ನು ಮಹಜರಿಗಾಗಿ ನಗರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ರೇವತಿಯವರ ಪುತ್ರ ನೀಡಿರುವ ದೂರಿನಂತೆ ಕಾವೂರು ಠಾಣೆಯಲ್ಲಿ ಆಕಸ್ಮಿಕ ಸಾವು ಪ್ರಕರಣ ದಾಖಲಾಗಿದೆ.

Edited By : Manjunath H D
Kshetra Samachara

Kshetra Samachara

12/01/2025 08:09 pm

Cinque Terre

14.7 K

Cinque Terre

0

ಸಂಬಂಧಿತ ಸುದ್ದಿ