ಬೆಂಗಳೂರು : ಅಣ್ಣನೇ ತಮ್ಮನನ್ನ ಕೊಲೆ ಮಾಡಿರೋ ಘಟನೆ ನಗರದ ಕೆಜಿ ಹಳ್ಳಿ ಠಾಣಾ ವ್ಯಾಪ್ತಿಯ ಅನ್ವರ್ ಲೇಔಟ್ ನಲ್ಲಿ ನಡೆದಿದೆ. ಬುಧವಾರ ಮಧ್ಯರಾತ್ರಿ ಅಕ್ರಂ ಬೇಗ್(28) ತನ್ನ ಅಣ್ಣ ಅಕ್ಬರ್ ಬೇಗ್‌ನಿಂದ ಕೊಲೆಯಾಗಿದ್ದಾನೆ.
ಕೊಲೆಯಾದ ಅಕ್ರಂ ತಾತಿ ಅಮ್ರಿಜ್ ಬೇಗ್‌ಗೆ ಮೂವರು ಮಕ್ಕಳಿದ್ದು, ಹಿರಿಯ ಪುತ್ರ ಅಕ್ಬರ್ ಮತ್ತು ಮಗಳು ಬೇರೆ ಕಡೆ ವಾಸವಿದ್ರು. ತಾಯಿಯ ಕಿರಿಯ ಪುತ್ರ ಅಕ್ರಂ ಒಬ್ಬನೇ ವಾಸವಿದ್ದ. ಅಕ್ರಂ ಪ್ರತಿದಿನ ಮದ್ಯ ಸೇವಿಸಿ ಬಂದು ತಾಯಿಗೆ ಹಿಂಸೆ ನೀಡುತ್ತಿದ್ನಂತೆ. ಮೊನ್ನೆ ರಾತ್ರಿಯೂ ಕುಡಿದು ಬಂದು ತಾಯಿ ಜೊತೆ ಜಗಳ ಆಡ್ತಿದ್ನಂತೆ.
ಇದೇ ವೇಳೆ ಹಿರಿಯ ಪುತ್ರ ಅಕ್ಬರ್ ಮನೆಗೆ ಬಂದಿದ್ದು, ಸಹೋದರನ ಜಗಳದಿಂದ ಬೇಸತ್ತು ಅಕ್ಬರ್ ಅಡುಗೆ ಮನೆಯಲ್ಲಿದ್ದ ಚಾಕು ತಂದು ಅಕ್ರಂ ಮೇಲೆ ಹಲ್ಲೆ ನಡೆಸಿದ್ದಾನೆ.
ಬಳಿಕ ಸಂಭಂಧಿಕರು ಅಕ್ರಂನನ್ನ ಆಸ್ಪತ್ರೆಗೆ ದಾಖಲಿಸಿದ್ರು, ಚಿಕಿತ್ಸೆ ಫಲಿಸದೆ ಅಕ್ರಂ ಬೇಗ್ ಸಾವನ್ನಪ್ಪಿದ್ದಾನೆ. ಘಟನೆ ಬಗ್ಗೆ ದೂರು ದಾಖಲಿಸಿಕೊಂಡಿದ್ದ ಕೆಜಿ ಹಳ್ಳಿ ಪೊಲೀಸರು ಅಕ್ಬರ್ ಬೇಗ್ ಬಂಧಿಸಿದ್ದಾರೆ.
PublicNext
10/01/2025 08:04 pm