ನೆಲಮಂಗಲ: ರಿಯಲ್ ಎಸ್ಟೇಟ್ ಉದ್ಯಮಿಗಳ ಪಾರ್ಟಿಗಾಗಿ ಕಾಡು ಪ್ರಾಣಿಗಳನ್ನ ಬೇಟೆಯಾಡುತ್ತಿದ್ದ ಮೂವರು
ಆರೋಪಿಗಳನ್ನು ಬಂಧಿಸುವ ಮೂಲಕ ಬೆಂಗಳೂರು ಸಂಚಾರಿ ಅರಣ್ಯಾಧಿಕಾರಿಗಳು ಯಶಸ್ವಿ ಕಾರ್ಯಚರಣೆ ನಡೆಸಿದ್ದಾರೆ.
ಶಾರ್ಪ್ ಶೂಟರ್ ಶ್ರೀನಿವಾಸ್ (46), ಹನುಮಂತರಾಜು (44) ಮತ್ತು ರಾಮನಗರದ ಮುನಿರಾಜು (38) ಬಂಧಿತ ಆರೋಪಿಗಳಾಗಿದ್ದು, ಕಾಡು ಪ್ರಾಣಿಗಳ ಬೇಟಿಯಾಡುತ್ತಿದ್ದ ವೇಳೆ ಅರಣ್ಯಾಧಿಕಾರಿಗಳನ್ನು ಕಂಡು ಥಾರ್ ಜೀಪ್‌ನಲ್ಲಿ ಆರೋಪಿಗಳು ಪರಾರಿಯಾಗುತ್ತಿದ್ರು. ಸಿನಿಮಾ ಶೈಲಿಯಲ್ಲಿ 6 ಕಿ.ಮೀವರೆಗೆ ಚೇಸಿಂಗ್ ಮಾಡಿ ಅರಣ್ಯಾಧಿಕಾರಿಗಳ ತಂಡ ಆರೋಪಿಗಳನ್ನು ರಾಮನಗರ ಜಿಲ್ಲೆಯ ಚಿಕ್ಕಕುಂಟನಹಳ್ಳಿ ಕ್ರಾಸ್ ಬಳಿ ಬಂಧಿಸಲಾಗಿದೆ. ಬಂಧಿತರಿಂದ 2 ಜಿಂಕೆ, 2 ಕಾಡು ಹಂದಿ, 1 ಗನ್, ಏರ್ ಗನ್, 11 ಜೀವಂತ ಗುಂಡು, 2 ಚಾಕು, ಕೊಡಲಿ, ಮಚ್ಚು, 3 ಮೊಬೈಲ್ ಜಪ್ತಿ ಮಾಡಲಾಗಿದೆ. ಹೈ-ಲೈಟ್‌ಗಳನ್ನ ಬಳಸಿ ಆರೋಪಿಗಳು ಬೇಟೆಯಾಡುತ್ತಿದ್ದು, ಸತತ 2 ತಿಂಗಳ ಪ್ರಯತ್ನದಿಂದ ಆರೋಪಿಗಳು ಬಂಧಿಸಲಾಗಿದೆ.
ಬೆಂಗಳೂರು ಅರಣ್ಯ ಸಂಚಾರಿ ದಳದ ಡಿಸಿಎಫ್ ಸುನಿತಾ ಬಾಯಿ,ಎಸಿಎಫ್ ಸರಿತಾ ಮಾರ್ಗದರ್ಶನ, ಆರ್‌ಎಫ್‌ಓ ರಮೇಶ್, ಸಿದ್ದರಾಜು, ಅಮೃತ್ ದೇಸಾಯಿ, ರಾಜು, ಆಶಾ, ಚೇಸಿಂಗ್ ಮಾಡಿದ ಚಾಲಕ ಸುರೇಶ್ ನೇತೃತ್ವದ ತಂಡ ವಿಶೇಷ ಕಾರ್ಯಚರಣೆ ನೆಡೆಸಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.
PublicNext
10/01/2025 09:30 pm