ಉಡುಪಿ: ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್ ನ ಕ್ಲಿನಿಕಲ್ ಸೈಕಾಲಜಿ ವಿಭಾಗ ಮತ್ತು ತತ್ವಶಾಸ್ತ್ರ ವಿಭಾಗವು ಜರ್ಮನಿಯ ಹಿಲ್ಡೆಶೈಮ್ ವಿಶ್ವವಿದ್ಯಾಲಯದ ತತ್ವಶಾಸ್ತ್ರ ಸಂಸ್ಥೆಯ ಸಹಯೋಗದೊಂದಿಗೆ "ಚಿಕಿತ್ಸಕ ತತ್ತ್ವಶಾಸ್ತ್ರ" ಕುರಿತು ಅಂತರರಾಷ್ಟ್ರೀಯ ಸಮ್ಮೇಳನ ಹಾಗೂ ಸೆಂಟರ್ ಫಾರ್ ಥೆರಪ್ಯೂಟಿಕ್ ಫಿಲಾಸಫಿ ಕೇಂದ್ರದ ಉದ್ಘಾಟನೆ ಇದೇ ಜನವರಿ 13 ರಿಂದ 17ರ ವರೆಗೆ ಮಣಿಪಾಲ ಎಂಐಟಿಯ ಲೈಬ್ರರಿ ಬಿಲ್ಡಿಂಗ್ ನ ನಾಲ್ಕನೇ ಮಹಡಿಯ ಎಸಿ ಆಡಿಟೋರಿಯಂನಲ್ಲಿ ನಡೆಯಲಿದೆ ಎಂದು ಮಾಹೆಯ ತತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಶ್ರೀನಿವಾಸ ಆಚಾರ್ಯ ತಿಳಿಸಿದರು.
ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮ್ಮೇಳನದಲ್ಲಿ 15 ಅಂತರಾಷ್ಟ್ರೀಯ ವಿದ್ವಾಂಸರು ಮತ್ತು 15 ಭಾರತೀಯ ವಿದ್ವಾಂಸರು ಭಾಗವಹಿಸಲಿದ್ದಾರೆ. ಪಾಶ್ಚಿಮಾತ್ಯ ಮತ್ತು ಭಾರತೀಯ ಸಂಪ್ರದಾಯಗಳ ಒಳನೋಟಗಳ ಮೇಲೆ ತತ್ವಶಾಸ್ತ್ರ ಮತ್ತು ಮಾನಸಿಕ ಚಿಕಿತ್ಸಕ ಅಭ್ಯಾಸಗಳ ನಡುವಿನ ಅಂತರದ ಬಗ್ಗೆ ಸಂವಾದ ನಡೆಯಲಿದೆ. ಐದು ದಿನಗಳ ಸಮ್ಮೇಳನವು ಪ್ರತಿದಿನ ವಿಭಿನ್ನ ವಿಷಯಗಳನ್ನು ಒಳಗೊಂಡಿರುತ್ತದೆ. ಮೊದಲನೇ ದಿನವು ಚಿಕಿತ್ಸಕ ತತ್ತ್ವಶಾಸ್ತ್ರದ ಕೇಂದ್ರದಲ್ಲಿ ಪ್ಯಾನಲ್ ಚರ್ಚೆಗಳು ಮತ್ತು ಮುಖ್ಯ ಭಾಷಣಗಳನ್ನು ಒಳಗೊಂಡಿದೆ.
ಎರಡನೇ ದಿನ ಸಮಾಲೋಚನೆ ಮತ್ತು ಚಿಕಿತ್ಸಾ ವಿಧಾನಗಳನ್ನು ಒಳಗೊಂಡಿರುತ್ತದೆ. ಮೂರನೇ ದಿನವು ಕಲಾ ಚಿಕಿತ್ಸೆ ಮತ್ತು ತತ್ವಶಾಸ್ತ್ರ ಮತ್ತು ಮನೋವಿಜ್ಞಾನದಲ್ಲಿನ ಪ್ರಸ್ತುತ ಸಮಸ್ಯೆಗಳನ್ನು ಒಳಗೊಂಡಿರುತ್ತದೆ. ನಾಲ್ಕನೇ ದಿನ ತತ್ವಶಾಸ್ತ್ರವನ್ನು ಪ್ರಾಯೋಗಿಕವಾಗಿ ಜೀವನದ ಕಲೆಯಾಗಿ ಹೇಗೆ ಬಳಸಬಹುದು ಎಂಬುದರ ಪರಿಗಣನೆಗಳ ಜೊತೆಗೆ ಜೀವನ ವಿಧಾನವಾಗಿ ತತ್ವಶಾಸ್ತ್ರ ಎಂಬ ವಿಷಯದಲ್ಲಿ ಸಂವಾದ ನಡೆಯಲಿದೆ. ಐದನೇ ದಿನ 'ಅಕಾಡೆಮಿಕ್ ಲೈಫ್ ಆಸ್ ಥೆರಪಿ ಎಂಬ ವಿಷಯದ ಕುರಿತು ನಡೆಯಲಿದೆ ಎಂದರು.
Kshetra Samachara
10/01/2025 06:10 pm