ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸದುರ್ಗ: ಮೂರನೇ ಬಾರಿ ಕೋಡಿ ಬಿದ್ದ ವಿವಿ ಸಾಗರ ಜಲಾಶಯ.

ಹೊಸದುರ್ಗ: ಹೊಸದುರ್ಗ ತಾಲೂಕಿನ ವಾಣಿವಿಲಾಸ ಸಾಗರ ಜಲಾಶಯ ನಿರ್ಮಾಣವಾದ ದಿನದಿಂದ ಇಲ್ಲಿಗೆ ಸತತ ಮೂರನೇ ಬಾರಿ ಕೋಡಿ ಬೀಳುವ ಮೂಲಕ ಇತಿಹಾಸ ಪುಟದಲ್ಲಿ ದಾಖಲೆಯನ್ನು ಸೃಷ್ಟಿ ಮಾಡಿದೆ.

ಕಳೆದ ಎರಡು ಬಾರಿಯೂ ಶುಕ್ರವಾರ ದಿನದಂದು ಕೋಡಿ ಬಿದ್ದಿದ್ದು ಇಂದು ಶುಕ್ರವಾರದಂದೆ ಕೋಡಿ ಹರಿಯುವ ಸೇತುವೆಯ ಮೇಲೆ ಈಗಾಗಲೇ ಸಣ್ಣ ಪ್ರಮಾಣದ ನೀರು ಹರಿಯುತ್ತಿದ್ದು ಈ ಹಿನ್ನೆಲೆಯಲ್ಲಿಯೇ ಸ್ಥಳೀಯರು ತಾಯಿ ಮಾರಿಕಣಿವೆಮ್ಮನವರ ಅನುಗ್ರಹದಿಂದಾ ಸಮೃದ್ಧಿ ಯಾಗಿ ಜಲಾಶಯ ತುಂಬಿ ಕೋಡಿ ಬೀಳುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇತ್ತ ಕೋಡಿ ಬಿದ್ದ ಖುಷಿ ಒಂದೆಡೆ ಆದರೆ ಮತ್ತೊಂದೆಡೆ ವಿವಿ ಸಾಗರ ಜಲಾಶಯದ ಹಿನ್ನೀರು ಭಾಗದಲ್ಲಿ ಅತಿ ಹೆಚ್ಚು ಅನಾಹುತಗಳು ಸಂಭವಿಸುವ ಆತಂಕದಲ್ಲಿ ಸಾರ್ವಜನಿಕರಿದ್ದಾರೆ.

ಆದರೆ ಕೋಡಿಬಿದ್ದ ವೇಳೆಯಲ್ಲಿ ಸಂಭವಿಸುವ ಅನಾಹುತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಹಶೀಲ್ದಾರ್ ತಿರುಪತಿ ಪಾಟೀಲ್ ಮಾಹಿತಿಯನ್ನು ನೀಡಿದರು.

Edited By : PublicNext Desk
Kshetra Samachara

Kshetra Samachara

10/01/2025 02:30 pm

Cinque Terre

2.32 K

Cinque Terre

0

ಸಂಬಂಧಿತ ಸುದ್ದಿ