ನಾಪೋಕ್ಲು: ಕೊಡಗು ಜಿಲ್ಲೆ ನಾಪೋಕ್ಲು ಸಮೀಪದ ಕೊಟ್ಟಮುಡಿ ಜಂಕ್ಷನ್ ನಲ್ಲಿ ಕಾರು ಮತ್ತು ಬೈಕ್ ಮುಖ ಮುಖಿ ಡಿಕ್ಕಿಯಗಿ ಬೈಕ್ ಸವಾರ ಕಾಲು ಮುರಿತ ಗೊಂಡ ಘಟನೆ ಜರುಗಿದೆ. ಮೂರ್ನಾಡು ಕಡೆಯಿಂದ ನಾಪೋಕ್ಲು ಕಡೆಗೆ ಬರುತ್ತಿದ್ದ ಬೈಕ್ ಹಾಗೂ ನಾಪೋಕ್ಲು ಕಡೆಯಿಂದ ಮೂರ್ನಾಡು ಕಡೆಗೆ ತೆರಳುತ್ತಿದ್ದ ಸ್ವಿಫ್ಟ್ ಕಾರ್ ಮುಖ ಮುಖಿ ಡಿಕ್ಕಿಯಾಗಿ ಕಾರಿನ ಮುಂಭಾಗ ಮತ್ತು ಬೈಕ್ ಜಖo ಕೊಂಡಿದ್ದು ಬೈಕ್ ಸವಾರ ರಂಗಸ್ವಾಮಿ ಎಂಬವರ ಕಾಲು ಮುರಿತಗೊಂಡು ತಲೆಗೂ ಏಟಾಗಿದೆ.
ನಾಪೋಕ್ಲು ವಿನಲ್ಲಿ ಪ್ರಥಮ ಚಿಕಿತ್ಸೆಯ ನಂತರ ಮಡಿಕೇರಿಯಲ್ಲಿ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲಾಗಿದೆ. ಬೈಕ್ ಸವಾರ ರಂಗಸ್ವಾಮಿ ಅವರ ದೂರ ಹಿನ್ನೆಲೆಯಲ್ಲಿ ನಾಪೋಕ್ಲು ಪೊಲೀಸರು ಕೇಸ್ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.
PublicNext
09/01/2025 08:07 am