ಸೋಮವಾರಪೇಟೆ: ಶ್ರೀನಗರದಲ್ಲಿ ನಡೆದ ಟ್ರಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಆಲೂರು ಗ್ರಾಮದ ಪಳಂಗೋಟು ದಿವಿನ್ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿಳೆಯುವ ಮೂಲಕ ಹುತಾತ್ಮಾರಾಗಿದ್ದಾರೆ.
ಹುತಾತ್ಮ ಯೋಧ ದಿವಿನ್ ಪಾರ್ಥಿವ ಶರೀರ ಇಂದು ಕೊಡಗಿಗೆ ಆಗಮಿಸಲಿದ್ದು ನಾಳೆ ಹುಟ್ಟೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ . ಇಂದು ತಲುಪಬೇಕಿದ್ದ ಮೃತದೇಹ ಹವಮಾನ ವೈಪರಿತ್ಯದಿಂದ ತಡವಾಗಿ ಕೊಡಗಿಗೆ ಆಗಮಿಸಲಿದೆ. ಶ್ರೀನಗರದಲ್ಲಿ ತೀವ್ರ ಹಿಮಪಾತದಿಂದ ಮುಖ್ಯ ರಸ್ತೆಗಳು ಮಂಜುಗಡ್ಡೆಗಳಿಂದ ಆವೃತವಾಗಿದೆ.
ಜತೆಗೆ ಅನೇಕ ಸಂಪರ್ಕ ರಸ್ತೆಗಳು ಬಂದ್ ಆಗಿರುವ ಹಿನ್ನಲೆಯಲ್ಲಿ ಶ್ರೀನಗರದಿಂದ ಯೋಧನ ಮೃತದೇಹವನ್ನ ರವಾನಿಸಲು ಸಾಧ್ಯವಾಗುತ್ತಿಲ್ಲ. ಇದೀಗ ದೀವಿನ್ ತಾಯಿ ಹಾಗೂ ಸ್ನೇಹಿತ ಜೊತೆಗಿದ್ದಾರೆ. ಹುತಾತ್ಮರಾದ ದಿವಿನ್‌ಗೆ ಪಾರ್ಥಿವ ಶರೀರಕ್ಕೆ ಶ್ರೀನಗರದ ಸೇನಾ ಕೇಂದ್ರದಲ್ಲಿ ಸರ್ಕಾರಿ ಗೌರವ ನಮನ ಸಲ್ಲಿಸಲಾಯಿತು.
ದೆಹಲಿಯಿಂದ ಇಂದು ಬೆಳಗ್ಗೆ 10 ಗಂಟೆಗೆ ವಿಶೇಷ ವಿಮಾನದಲ್ಲಿ ಹೊರಟು ಸಂಜೆ 4 ಗಂಟೆಗೆ ಬೆಂಗಳೂರು ತಲುಪಲಿರುವ ಸಾಧ್ಯತೆ ಇದ್ದು ಸಂಜೆ 6 ಗಂಟೆಗೆ ಬೆಂಗಳೂರು ವಿಮಾನ ನಿಲ್ದಾಣದಿಂದ ಬಳಿಕ ಸೇನಾ ವಾಹನದಲ್ಲಿ ಹುಟ್ಟೂರು ಆಲೂರು ಸಿದ್ದಾಪುರಕ್ಕೆ ಆಗಮಿಸಲಿದೆ.
ಆಲೂರು ಸಿದ್ದಾಪುರದ ಸರ್ಕಾರಿ ಶಾಲೆಯಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು ನಾಳೆ ಮಧ್ಯಾಹನ್ನದ ವೇಳೆ ಸ್ವಗ್ರಾಮ ಆಲೂರು ಸಿದ್ದಾಪುರದಲ್ಲಿ ಸರ್ಕಾರಿ ಮತ್ತು ಸೇನಾ ಗೌರವಗಳೊಂದಿಗೆ ದಿವಿನ್ ಪಾರ್ಥಿವ ಶರೀರದ ಅಂತ್ಯ ಕ್ರಿಯೆ ನಡೆಯಲಿದೆ.
PublicNext
31/12/2024 10:54 am