ಹುಬ್ಬಳ್ಳಿ : ಅಪರಿಚಿತ ವ್ಯಕ್ತಿಯೋರ್ವ ಆನಂದನಗರದ ಮನೆ- ಮನೆಗಳ ಮೇಲ್ಛಾವಣಿ ಏರಿ ಹುಚ್ಚನ ತರಹ ವರ್ತನೆ ತೋರಿ ಕೊನೆಗೆ ಪೊಲೀಸರ ಅತಿಥಿಯಾಗಿದ್ದಾನೆ.
ಹೌದು... ಹುಬ್ಬಳ್ಳಿಯ ಆನಂದನಗರದಲ್ಲಿ ಕಟ್ಟುಮಸ್ತಾದ ದೇಹದ ಬ್ಲ್ಯಾಕ್ ಜರ್ಕಿನ್ ತೊಟ್ಟಿದ್ದ ಈತ ಮನೆಗಳಿಗೆ ನುಗ್ಗಿ ಮಾನಸಿಕ ಅಸ್ವಸ್ಥನಂತೆ ವರ್ತಿಸಿದ್ದಾನೆ. ಇದರಿಂದ ಭಯಭೀತರಾದ ಜನರು 112 ಪೊಲೀಸ್ ವಾಹನಕ್ಕೆ ಕರೆ ಮಾಡಿ ವಿಷಯ ತಿಳಿಸಿದ ಬಳಿಕ ಸ್ಥಳಕ್ಕೆ ಧಾವಿಸಿದ ಪೊಲೀಸರ ಎದುರು ರಾಮ ರಾಮ ಜಯರಾಮ ಜಪ ಶುರುವಿಟ್ಟುಕೊಂಡಿದ್ದಾನೆ.
ಈ ವೇಳೆ ಪೊಲೀಸರು ವ್ಯಕ್ತಿಯ ಜೇಬು ಪರಿಶೀಲನೆ ನಡೆಸಿದಾಗ ಒಂದು ಎಂಡ್ರಾಯ್ಡ್ ಮೊಬೈಲ್, ಒಂದು ಕೀ ಪ್ಯಾಡ್ ಮೊಬೈಲ್ ಮತ್ತು ಎಟಿಎಂ ಕಾರ್ಡ್ ಸಿಕ್ಕಿದ್ದು ಪೊಲೀಸರು ಮುಂದಿನ ತನಿಖೆಗೆ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ಒಟ್ಟಾರೆ ಖತರ್ನಾಕ್ ಗತ್ತು ತೋರಿ ಪೊಲೀಸರು ಬಂದ ತಕ್ಷಣ ವರಸೆ ಬದಲಿಸಿದ ಈ ವ್ಯಕ್ತಿಯ ಅಸಲಿ ಬಣ್ಣವನ್ನು ಪೊಲೀಸರೇ ಬಯಲು ಮಾಡಬೇಕಿದೆ.
-ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
08/01/2025 07:12 pm