ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮಹಾತ್ಮಾಗಾಂಧಿ ರಾಷ್ಟ್ರಪಿತ ಅಲ್ಲ ಎಂದ ಮೀನಾಕ್ಷಿ ಶಹರವತ್‌ ವಿರುದ್ಧ ಸುಮೊಟೋ ಕೇಸ್

ಉಡುಪಿ: ಉಡುಪಿಯ ಪಿಪಿಸಿ ಆಡೋಟೋರಿಯಂನಲ್ಲಿ ನಡೆದ ವಿಶ್ವಾರ್ಪಣಂ ಕಾರ್ಯಕ್ರಮದಲ್ಲಿ ಪ್ರಚೋದನಕಾರಿಯಾಗಿ ಭಾಷಣ ಮಾಡಿದ ಆರೋಪದಲ್ಲಿ ಡೆಹ್ರಾಡೂನ್‌ನ ಭಾಷಣಕಾರ್ತಿ, ಚಿಂತಕಿ ಮೀನಾಕ್ಷಿ ಶಹರವತ್‌ ಸೇರಿದಂತೆ ಇಬ್ಬರ ವಿರುದ್ಧ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ.

ಮೀನಾಕ್ಷಿ ಶಹರವತ್ ಕಾರ್ಯಕ್ರಮದಲ್ಲಿ 'ಬಾಂಗ್ಲಾ ಪಾಠ' ಎಂಬ ವಿಷಯವನ್ನು ಉದ್ದೇಶಿಸಿ ಮಾತನಾಡಿ, ಗಾಂಧೀಜಿ ಜಿನ್ನಾ ಜೊತೆಗೆ ಸೇರಿಕೊಂಡು ಪಾಕಿಸ್ತಾನಕ್ಕೆ ಜನ್ಮ ನೀಡಿದ್ದಾರೆ, ನಾವು ಮಹಾತ್ಮಾ ಗಾಂದೀಜಿಯನ್ನು ರಾಷ್ಟ್ರಪಿತ ಎಂದು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ. ಹೀಗೆ ಅವರು ತಮ್ಮ ಭಾಷಣದಲ್ಲಿ ದೇಶದ ಬೇರೆ ಬೇರೆ ಧರ್ಮಗಳ ನಡುವೆ ಘರ್ಷಣೆ ಹಾಗೂ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ರೀತಿಯಲ್ಲಿ ಪ್ರಚೋದನಕಾರಿಯಾಗಿ ಭಾಷಣ ಮಾಡಿರುವುದಾಗಿ ದೂರಲಾಗಿದೆ.

ಅದರಂತೆ ಮೀನಾಕ್ಷಿ ಶಹರವತ್ ಮತ್ತು ಕಾರ್ಯಕ್ರಮದ ಆಯೋಜಕ ಗೋವಿಂದರಾಜು ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಕಲಂ 353(2) ಜೊತೆಗೆ 3(5)ರಡಿಯಲ್ಲಿ ಪ್ರಕರಣ ದಾಖಲಾಗಿದೆ.

Edited By : PublicNext Desk
Kshetra Samachara

Kshetra Samachara

07/01/2025 09:11 am

Cinque Terre

4.08 K

Cinque Terre

0

ಸಂಬಂಧಿತ ಸುದ್ದಿ