ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪೊಲೀಸರ ಸೋಗಿನಲ್ಲಿ 57 ವರ್ಷದ ಅಂಕಲ್‌ನನ್ನು ಸುಲಿಗೆ ಮಾಡಿದ್ದ ಸುಂದರಿ ಅರೆಸ್ಟ್

ಬೆಂಗಳೂರು: 57 ವರ್ಷದ ಅಂಕಲ್‌ಗೆ ಆಸೆ ತೋರಿಸಿ ಖೆಡ್ಡಾಗೆ ಕೆಡವಿದ್ದ ಹನಿ ಟ್ರಾಪ್ ಸುಂದರಿ ಕೊನೆಗೂ ಲಾಕ್ ಆಗಿದ್ದಾಳೆ. 57ವರ್ಷದ ಅಂಕಲ್‌ಗೆ ಪರಿಚಯವಿದ್ದ 20ರ ಅಸುಪಾಸಿನ ಸುಂದರಿ ಟೀ ಕುಡಿಯೋಕೆ ಅಂತ ಅಂಕಲ್‌ನನ್ನ ಮನೆಗೆ ಕರೆಸಿಕೊಂಡಿದ್ದಾಳೆ. ನಂತರ ಪೊಲೀಸರ ಹೆಸ್ರಲ್ಲಿ ಬೆದರಿಕೆ ಹಾಕಿ ಲಾಕ್ ಮಾಡಿಸಿ ಹಣ ಸುಲಿಗೆ ಮಾಡಿದ್ದಳು.. ಸಿವಿಲ್‌ ಕಂಟ್ರಾಕ್ಟರ್ ಆಗಿರೋ ಅಂಕಲ್ ಒಳ್ಳೆ ಪಾರ್ಟಿ ಅಂತ ಸುರಸುಂದರಿ ನಯನ ಸರಿಯಾಗಿ ಪ್ಲ್ಯಾನ್ ಮಾಡಿ ಅಂಕಲ್‌ನನ್ನ ಬಲೆಗೆ ಬೀಸಿದ್ದಳು.

ಟೀ‌ ಕುಡಿದುಕೊಂಡು ಹೋಗಿ ಅಂತ ಮನೆಗೆ ಕರೆದಿದ್ದಾಳೆ. ಸುಂದರಿ ಸ್ಮೈಲ್‌ಗೆ ಕರಗಿದ ಅಂಕಲ್ ಸೀದಾ ಅವಳ ಸ್ಕೂಟಿ ಫಾಲೋ ಮಾಡಿಕೊಂಡು ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯ ತುಂಗಾನಗರದ ಆಕೆಯ ಮನೆಗೆ ಹೋಗಿದ್ರು. ಬ್ಯೂಟಿ ಜೊತೆ ಅಂಕಲ್ ಜಾಲಿ-ಜಾಲಿಯಾಗಿದ್ದಾಗ ಅಪರಿತರು ನಾವು ಪೊಲೀಸ್ರು ಅಂತ ಹೇಳ್ಕೊಂಡು ಎಂಟ್ರಿ ಕೊಟ್ಟಿದ್ದಾರೆ.

ವ್ಯಭಿಚಾರ ನಡೆಸ್ತಿದ್ದಾರೆ ಅಂತ ಪೊಲೀಸರ ಸೋಗಿನಲ್ಲಿ ಬ್ಲಾಕ್ ಮೇಲ್ ಮಾಡಿ ಹಲ್ಲೆ ಮಾಡಿ ಬಟ್ಟೆ ಬಿಚ್ಚಿಸಿ ದ್ದಾರೆ. ನಂತರ ಫೋಟೋ ತೆಗೆದುಕೊಂಡು ಅಂಕಲ್ ಜೇಬಲ್ಲಿದ್ದ ಹಣ ಮೈಮೇಲಿದ್ದ ಚಿನ್ನ ಬಿಚ್ಚಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಫೋನ್ ಪೇ ಮೂಲಕ ಹಣ ಹಾಕಿಸಿಕೊಂಡಿದ್ದಾರೆ. ಸಾಲದ್ದಕ್ಕೆ ಮತ್ತೆ‌ ಎರಡು ಲಕ್ಷ ಹಣ ನೀಡಬೇಕು ಎಂದು ಧಮ್ಕಿ ಕೂಡ ಹಾಕಿದ್ರಂತೆ.

ಇದಾದ ನಂತರ ನಯಾನಗೆ ಬಾ ಹೋಗಿ ಕಂಪ್ಲೈಂಟ್ ಕೊಡೋಣ ಅಂತ ಈ ಅಂಕಲ್ ಕರೆದ್ರೆ ಸ್ಟೇಷನ್, ಕಂಪ್ಲೈಂಟ್ ಅಂತ ಹೋದ್ರೆ ಮಗುನಾ ಕರ್ಕೊಂಡು ನಿಮ್ಮ ಮನೆಗೆ ಬರ್ತಿನಿ ಅಂತ ಅಂಕಲ್‌ನ ಮತ್ತೆ ಬ್ಲಾಕ್ ಮೇಲ್ ಮಾಡಿದ್ದಾಳೆ. ನಂತರ ಧೈರ್ಯ ಮಾಡಿ ಬ್ಯಾಡರಹಳ್ಳಿ ಠಾಣೆಗೆ ನೊಂದ ಕಂಟ್ರಾಕ್ಟರ್ ಅಂಕಲ್ ದೂರು ನೀಡಿದ್ದಾರೆ.

ದೂರು ದಾಖಲಾಗ್ತಿದ್ದಂತೆ ಬ್ಯಾಡರಹಳ್ಳಿ ಪೊಲೀಸ್ರು ಸುಲಿಗೆ ಗ್ಯಾಂಗ್‌ನ ಸಂತೋಷ್, ಅಜಯ್, ಜಯರಾಜ್ ಎಂಬುವರನ್ನ ಬಂಧಿಸಿದ್ದಾರೆ. ಕಳೆದ ಮೂರು ವಾರಗಳಿಂದ ನಾಪತ್ತೆಯಾಗಿದ್ದ ನಯನ ಪೊಲೀಸರ ಈಗ ಬಲೆಗೆ ಬಿದ್ದಿದ್ದಾಳೆ.

ಹೆಬ್ಬಾಳ ಬಳಿ ಇಂದು ಬ್ಯಾಡರಹಳ್ಳಿ ಪೊಲೀಸ್ರು ನಯನ ಜೊತೆಗೆ ಮತ್ತೊಬ್ಬ ಆರೋಪಿ ಮೋಹನ್ ಎಂಬಾತನನ್ನೂ ಬಂಧಿಸಿದ್ದಾರೆ. ನಯನ ತಾಯಿಯನ್ನು ಪೊಲೀಸ್ರು ವಶಕ್ಕೆ ಪಡೆದಿದ್ದು ನಯನ ತಾಯಿ ಪ್ರಕರಣದಲ್ಲಿ ಬಾಗಿ ಆಗಿದ್ದಾರಾ? ಅನ್ನೋದನ್ನ ವಿಚಾರಣೆ ನಡೆಸ್ತಿದ್ದಾರೆ.

Edited By : Suman K
PublicNext

PublicNext

06/01/2025 06:25 pm

Cinque Terre

25.42 K

Cinque Terre

0