ಹಿರಿಯೂರು :ಕುರಿಗಾಹಿಯನ್ನು ಕೊಲೆಗೈದು ಕುರಿಗಳ ಕಳ್ಳತನ ಮಾಡಿದ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ದೇವಲಕೆರೆ ಗ್ರಾಮದಲ್ಲಿ ನಡೆದಿದೆದಿದ್ದು ಕುರಿ ಕದ್ದ ಕಳ್ಳ ಹಿರಿಯೂರು ನಗರದಲ್ಲಿ ಕದ್ದ ಕುರಿಗಳನ್ನ ಮಾರಾಟ ಮಾಡುವಾಗ ಸಿಕ್ಕಿಬಿದ್ದಿದ್ದಾನೆ.
ದೇವಲಕೆರೆ ಗ್ರಾಮದ ನರಸಿಂಹಪ್ಪ (60) ಕೊಲೆಯಾದ ಕುರಿಗಾಹಿಯಾದರೆ, ಕರಿಯಮ್ಮನಪಾಳ್ಯ ಗ್ರಾಮದ ನಿವಾಸಿ ಮಣಿಕಂಠ (32) ಆರೋಪಿಯಾಗಿದ್ದಾನೆ.ನರಸಿಂಹಪ್ಪ ತನಗೆ ಸೇರಿದ 30 ಕುರಿಗಳನ್ನ ಮೇಯಿಸಲು ತೆರಳಿದ್ದ. ಈ ವೇಳೆ ನರಸಿಂಹಪ್ಪನನ್ನು ಕೊಲೆಗೈದು 30 ಕುರಿಗಳನ್ನು ಮಣಿಕಂಠ ಕಳ್ಳತನ ಮಾಡಿದ್ದ.ಚಿತ್ರದುರ್ಗ ಜಿಲ್ಲೆ ಹಿರಿಯೂರಿನಲ್ಲಿ ನಡೆಯುವ ಕುರಿ ಮಾರಾಟ ಸಂತೆಯಲ್ಲಿ ಮಾರಾಟ ಮಾಡಲು ಮಣಿಕಂಠ ಯತ್ನಿಸುತ್ತಿದ್ದ. ಈ ವೇಳೆ ಕುರಿಗಳ ಸಮೇತ ಆರೋಪಿ ಮಣಿಕಂಠ ಸಿಕ್ಕಿಬಿದಿದ್ದಾನೆ. ಮೃತನ ಕುಟುಂಬಸ್ಥರು ಆರೋಪಿಯನ್ನು ಕರೆತಂದು ಪೊಲೀಸರಿಗೆ ಒಪ್ಪಿಸಿದ್ದಾರೆ.
Kshetra Samachara
05/01/2025 03:57 pm