ನರಗುಂದ : ತಾಲ್ಲೂಕಿನ ಬನಹಟ್ಟಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿನ ಕುರ್ಲಗೇರಿ ಗ್ರಾಮ ಬೆಣ್ಣೆ ಹಳ್ಳದ ಪ್ರವಾಹದಿಂದ ಕುರ್ಲಗೇರಿ ಗ್ರಾಮವನ್ನು ಅದೇ ಗ್ರಾಮದ ಹೊರ ವಲಯಕ್ಕೆ ಸ್ಥಾಳಾಂತರ ಮಾಡಲಾಗಿತ್ತು, 2008ರಲ್ಲಿ ಉಂಟಾದ ಬೆಣ್ಣೆ ಹಳ್ಳದ ಪ್ರವಾಹದಿಂದ ಗ್ರಾಮಸ್ಥರು ಸಂಕಷ್ಟ ಅನುಭವಿಸಿದ್ದರು.
ಹೊಸದಾಗಿ ನಿರ್ಮಿಸಿದ ಮನೆಗಳು ಶಾಲೆಗಳು ಸಾರ್ವಜನಿಕ ಕಟ್ಟಡಗಳು ಈಗ ಪಾಳುಬಿದ್ದ ಹಾಳಾಗುತ್ತಿವೆ. ಇದರಿಂದ ಸಾರ್ವಜನಿಕ ಆಸ್ತಿಗಳು ಬೇರೆ ಬೇರೆ ರೀತಿಯಲ್ಲಿ ದುರ್ಬಳಕೆ ಆಗುತ್ತಿವೆ ಮದ್ಯಪ್ರಿಯರ ಹಾವಳಿಯಿಂದ ಕಟ್ಟಡದ ಕಿಟಕಿ, ಬಾಗಿಲು , ಕಳ್ಳತನ ವಾಗುತ್ತಿವೆ, ಇನ್ನು ಹೊಸ ಗ್ರಾಮದಲ್ಲಿ ಸರಿಯಾದ ರೀತಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ.,
ಅಲ್ಲದೆ ಸರ್ಕಾರದ ಆದೇಶದಂತೆ ಗ್ರಾಮಸ್ಥರಿಗೆ ಸಿಗಬೇಕಾದ ಮನೆಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಅಕ್ರಮಗಳು ನಡೆಯುತ್ತಿವೆ. ಬೇರೆ ಬೇರೆ ಜಿಲ್ಲೆಯ ನಿವಾಸಿಗಳು ಇಲ್ಲಿ ವಾಸವಾಗಿದ್ದಾರ, ಸ್ಥಳೀಯ ರಾಜಕೀಯ ನಾಯಕರು ಗುದ್ದಾಟದಲ್ಲಿ ಮನೆಗಳು ಸರಿಯಾದ ರೀತಿಯಲ್ಲಿ ಹಂಚಿಕೆ ಹಾಗಿಲ್ಲ ಎಂದು ಅನೇಕರು ದೂರುಗಳನ್ನು ನೀಡಿದ್ರೂ ಅಧಿಕಾರಿಗಳು ಕ್ರಮ ಕೈಗೊಳ್ಳಲು ಹಿಂದೇಟು ಹಾಕುವ ಮೂಲಕ ಜಾಣ ಕುರುಡರಂತೆ ವರ್ತಿಸ್ತಾ ಇದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಒಟ್ಟಿನಲ್ಲಿ ದಶಕಗಳ ಕಾಲ ಕಳೆದರು ಗ್ರಾಮದ ನಿವೇಶನಗಳು ಗ್ರಾಮಸ್ಥರಿಗೆ ಸಿಕ್ಕಿಲ್ಲ, ಇನ್ನು ಕೆಲವೊಂದು ಪಾಳು ಬಿದ್ದು ಹಾಳಾಗುತ್ತಿದ್ದರೆ, ಇನ್ನು ಕೆಲವು ನಿವೇಶನಗಳು ಬೇರೆ ಜಿಲ್ಲೆಯ ನಾಗರಿಕರ ಪಾಲಾಗುತ್ತಿವೆ., ಆದ್ದರಿಂದ ಇನ್ನಾದರು ತಾಲ್ಲೂಕು ಆಡಳಿತ ಈ ಬಗ್ಗೆ ಗಮನಿಸಿ ಮನೆಗಳನ್ನು ಸರಿಯಾದ ರೀತಿಯಲ್ಲಿ ಹಂಚಿಕೆ ಮಾಡಿ , ಹಕ್ಕುಗಳ ಪತ್ರಗಳನ್ನು ನೀಡಬೇಕು ಎನ್ನುವುದೇ ನಮ್ಮ ಆಶಯ.
ವರದಿ - ಮಲ್ಲಿಕಾರ್ಜುನ , ಪಬ್ಲಿಕ್ ನೆಕ್ಸ್ಟ್ , ನರಗುಂದ
PublicNext
05/01/2025 12:44 pm