ನರಗುಂದ : ನರಗುಂದ ಪಟ್ಟಣದ ಸ್ಮಾಶನ ಭೂಮಿಯಲ್ಲಿ ಸುಮಾರು ಅರವತ್ತುಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದ್ದು , ಅವುಗಳನ್ನು ರಕ್ಷಣೆ ಮಾಡುವಂತೆ ಒತ್ತಾಯಿಸಿ ಕನ್ನಡದ ಪರ ಸಂಘಟನೆಗಳು ಹಾಗೂ ದಲಿತ ಸಂಘಟನೆಗಳು ಮನವಿ ಮಾಡಿಕೊಂಡಿದ್ದು ಪುರಸಭೆಯಿಂದ ಸಸಿಗಳ ರಕ್ಷಣೆ ಕಾರ್ಯ ಮಾಡಬೇಕಿದೆ.
ಇನ್ನೂ ಸಸಿಗಳ ರಕ್ಷಣೆ ಸಂಬಂಧ ನರಗುಂದ ಪುರಸಭೆ ಮುಖ್ಯಾಧಿಕಾರಿಗೆ ಈ ಮನವಿಯನ್ನು ಸಲ್ಲಿಸಲಾಗಿದೆ. ಸಸಿಗಳು ರಕ್ಷಣೆಗೆ ಸಿಬ್ಬಂದಿಗಳುನ್ನು ನೇಮಕ ಮಾಡಬೇಕು ಮತ್ತು ರುದ್ರ ಭೂಮಿ ಸುತ್ತಲಿನ ಪರಿಸರ ಉಳಿಸಬೇಕು ಎನ್ನುವದು ಕನ್ನಡ ಪರ ಸಂಘಟನೆಗಳು ಹಾಗೂ ದಲಿತ ಪರ ಸಂಘಟನೆಗಳು ಒತ್ತಾಸೆಯಾಗಿದೆ. ಸಂದರ್ಭದಲ್ಲಿ ಕನ್ನಡ ಸೇನೆ ಜಿಲ್ಲಾಧ್ಯಕ್ಷ ರವಿ ಚಿಂತಾಲ ಹಾಗೂ ದಲಿತ ಮುಖಂಡರು ಉಪಸ್ಥಿತರಿದ್ದರು.
ವರದಿ - ಮಲ್ಲಿಕಾರ್ಜುನ ಪಬ್ಲಿಕ್ ನೆಕ್ಸ್ಟ್ ನರಗುಂದ
PublicNext
04/01/2025 02:44 pm