ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಹಟ್ಟಿ: ನಾಯಿ ನರಿಗಳಿಗೆ ಆಹಾರವಾಗುತ್ತಿವೇ ವಿದೇಶಿ ಪಕ್ಷಿಗಳು

ಶಿರಹಟ್ಟಿ: ತಾಲೂಕಿನ ಮಾಗಡಿ ಕೆರೆ ಸಂರಕ್ಷಣಾ ಮೀಸಲು ಕೆರೆಯು ಸುಮಾರು 50 ಹೆಕ್ಟೇರ್‌ ಪ್ರದೇಶದಲ್ಲಿ ಹರಡಿದೆ. ಇಲ್ಲಿಗೆ ಪ್ರತಿ ವರ್ಷ 166 ಜಾತಿಯ, ಅಂದಾಜು 8 ಸಾವಿರಕ್ಕೂ ಹೆಚ್ಚು ವಿದೇಶಿ ಪಕ್ಷಿಗಳು ಚಳಿಗಾಲದಲ್ಲಿ ವಲಸೆ ಬರುತ್ತವೆ ಎಂದು ಅಂದಾಜಿಸಲಾಗಿದೆ.

ಹೌದು....! ಇಲ್ಲಿಗೆ ಬರುವ ವಿದೇಶಿ ಪಕ್ಷಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ರಾಜ್ಯ ಸರ್ಕಾರ ಹಾಗೂ ತಾಲೂಕು ಆಡಳಿತದ ನಿರ್ಲಕ್ಷ್ಯದಿಂದಾಗಿ ಇಂದು ವಿದೇಶಿ ಪಕ್ಷಿಗಳು ನಾಯಿ ನರಿಗಳ ಪಾಲಾಗುತ್ತಿವೆ.

ಈ ಪಕ್ಷಿಗಳಿಂದ ಗದಗ ಜಿಲ್ಲೆಯ ಹೆಸರು ಎಲ್ಲೆಡೆ ಕೇಳಿ ಬರುತ್ತಿದೆ. ಪಕ್ಷಿಗಳು ಈ ರೀತಿಯಲ್ಲಿ ಬಲಿಯಾದರೆ ಮುಂದಿನ ದಿನಗಳಲ್ಲಿ ಇಲ್ಲಿ ಪಕ್ಷಿಗಳೆ ಇರುವುದಿಲ್ಲ ಎಂದು ಪಕ್ಷಿಪ್ರಿಯರು ಆಕ್ರೋಶಗೊಂಡಿದ್ದಾರೆ

ವರದಿ: ಗೌರೀಶ ನಾಗಶೆಟ್ಟಿ ಪಬ್ಲಿಕ್ ನೆಕ್ಸ್ಟ್ ಶಿರಹಟ್ಟಿ

Edited By : Nagesh Gaonkar
PublicNext

PublicNext

26/12/2024 03:39 pm

Cinque Terre

37.12 K

Cinque Terre

0