ನೆಲಮಂಗಲ: 40ಕ್ಕೂ ಜನರು ಪ್ರಯಾಣಿಸುತ್ತಿದ್ದ ಐರಾವತ ಬಸ್ ಹಿಂಭಾಗದ ಎಂಜಿನ್‌ನಲ್ಲಿ ಹೊಗೆ ಕಾಣಿಸಿಕೊಂಡು, ಪ್ರಯಾಣಿಕರು ಆತಂಕಗೊಂಡ ಘಟನೆ ನೆಲಮಂಗಲದ ತುಮಕೂರು ರಸ್ತೆಯಲ್ಲಿ ನೆಡೆದಿದೆ.
ಇಂದು ಮಧ್ಯಾಹ್ನ ಮೆಜೆಸ್ಟಿಕ್‌ನಿಂದ ಚಿಕ್ಕಮಗಳೂರಿಗೆ ನೆಲಮಂಗಲ ಮಾರ್ಗವಾಗಿ ತೆರಳುತ್ತಿದ್ದ ಐರಾವತ ಬಸ್ಸಿನ ಹಿಂಭಾಗದಲ್ಲಿ ಎಂಜಿನ್ ಹೀಟ್ ಆಗಿ ಹೊಗೆ ಕಾಣಿಸಿಕೊಂಡಿದೆ. ಕೂಡಲೇ ಚಾಲಕ ಬಸ್ ನಿಲ್ಲಿಸಿ ನೀರಾಯಿಸಿ ಪ್ರಯಾಣಿಕರ ಆತಂಕವನ್ನು ದೂರ ಮಾಡಿದ್ದಾರೆ.
ಇನ್ನೂ ಬಸ್ ಹಿಂಬದಿ ಹೊಗೆ ಆವರಿಸಿದ್ದನ್ನು ನೋಡಿದ ಸ್ಥಳೀಯ ಸಾರ್ವಜನಿಕರು ನೆಲಮಂಗಲ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ವಾಹನ ಧಾವಿಸಿತು. ಇದ್ರಿಂದ ಹೆದ್ದಾರಿಯಲ್ಲಿ ಕೆಲ ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು. ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ, ಪ್ರಯಾಣಿಕರು ಸೇಫ್ ಆಗಿದ್ದಾರೆ.
PublicNext
04/01/2025 09:14 pm