ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಿರ್ಮಾಣ ಹಂತದ ಅನಧಿಕೃತ ಕಟ್ಟಡಗಳ ಮೇಲೆ ಬಿಬಿಎಂಪಿ ಸಮರ

ಬೆಂಗಳೂರು: ನಿರ್ಮಾಣ ಹಂತದ ಅನಧಿಕೃತ ಕಟ್ಟಡಗಳ ಮೇಲೆ ಬಿಬಿಎಂಪಿ ಸಮರ ಸಾರಿದೆ. ನಿರ್ಮಾಣ ಹಂತದ ಅನಧಿಕೃತ ಕಟ್ಟಡಗಳ ಸರ್ವೆಗೆ ಚುರುಕು ಕೊಟ್ಟಿದೆ. ಕಳೆದ ಅಕ್ಟೋಬರ್ ತಿಂಗಳಲ್ಲಿ ಬಾಬುಸಾ ಪಾಳ್ಯದಲ್ಲಿ ಅನಧಿಕೃತ ಕಟ್ಟಡ ಕುಸಿದು 9 ಜನ ಕಾರ್ಮಿಕರು ಸಾವನ್ನಪ್ಪಿದ್ದು, ಈ ಹಿನ್ನೆಲೆಯಲ್ಲಿ ನಗರದಲ್ಲಿರುವ ನಿರ್ಮಾಣ ಹಂತದ ಕಟ್ಟಡಗಳ ಸರ್ವೆಗೆ ಬಿಬಿಎಂಪಿ ಮುಂದಾಗಿದೆ.

ಪಾಲಿಕೆ ಅಧಿಕಾರಿಗಳ ಸರ್ವೆ ಪ್ರಕಾರ ನಗರದಲ್ಲಿ 2 ಸಾವಿರಕ್ಕೂ ಅಧಿಕ ಅಕ್ರಮ ಕಟ್ಟಡಗಳು ಪತ್ತೆಯಾಗಿದ್ದು, ಈ ಪೈಕಿ ಮಹದೇವಪುರ ವಲಯದಲ್ಲಿ ಅತಿ ಹೆಚ್ಚು ಅನಧಿಕೃತ ನಿರ್ಮಾಣ ಹಂತದ ಕಟ್ಟಡ ಪತ್ತೆಯಾಗಿದೆ. ಮಹದೇವಪುರ ವಲಯ ಒಂದರಲ್ಲೇ 400 ಕ್ಕೂ ಅಧಿಕ ಅನಧಿಕೃತ ನಿರ್ಮಾಣ ಹಂತದ ಕಟ್ಟಡ ಪತ್ತೆಯಾಗಿದ್ದು, ನೋಟಿಸ್ ನೀಡಲಾಗಿದೆ ಹಾಗೂ ಅನಧಿಕೃತ ಕಟ್ಟಡಗಳ ಮೇಲೆ ಬ್ಯಾನರ್ ಅಳವಡಿಸಿ ತೆರವು ಸೂಚನೆ ನೀಡಿದೆ ಬಿಬಿಎಂಪಿ.

ನೋಟಿಸ್ ನೀಡಿ 7 ದಿನಗಳಲ್ಲಿ ಕಟ್ಟಡ ತೆರವು ಮಾಡಿದ್ದಾರೆ. ಸೀಜ್ ಮಾಡುವುದಾಗಿ ಬಿಬಿಎಂಪಿ ಹೇಳಿದ್ದು ಇಲ್ಲದಿದ್ದರೆ ಪಾಲಿಕೆಯಿಂದ ಕಟ್ಟಡ ತೆರವು ಮಾಡ್ತೀವಿ ಎಂದು ಖಡಕ್ ವಾರ್ನಿಂಗ್ ನೀಡಿದೆ.

Edited By : Suman K
Kshetra Samachara

Kshetra Samachara

04/01/2025 06:17 pm

Cinque Terre

1.43 K

Cinque Terre

0

ಸಂಬಂಧಿತ ಸುದ್ದಿ