ಬೆಂಗಳೂರು:ಬಿಜೆಪಿಯಲ್ಲಿ ಮನೆ ಒಂದು ನೂರು ಬಾಗಿಲಾಗಿದೆ. ಇವತ್ತು ಕಲ್ಬುರ್ಗಿ ಪ್ರತಿಭಟನೆಗೆ ಯಾರು ಯಾರು ಬರ್ತಿದ್ದಾರೆ..? ಸರ್ಕಾರದಲ್ಲಿ ಸಚಿವರ ರಾಜೀನಾಮೆಗೆ ಒತ್ತಾಯ ಮಾಡುವುದಕ್ಕೆ ಕೇಂದ್ರದಿಂದ ಎಷ್ಟು ಜನ ಬರುತ್ತಿದ್ದಾರೆ. ವಿಜಯೇಂದ್ರ ಶಿವಮೊಗ್ಗದಲ್ಲಿದ್ದಾರೆ. ಅವರ ಹಿರಿಯ ನಾಯಕರು ಬಳ್ಳಾರಿಯಲ್ಲಿದ್ದಾರೆ.
ಕೆಲವರು ಕೆ ಎಸ್ ಆರ್ ಟಿ ಸಿ ಧರಣಿ ಮಾಡಲು ಹೋಗ್ತಿದ್ದಾರೆ. ಹೈಕಮಾಂಡ್ ಮಾತು ಯತ್ನಾಳ್ ಕೇಳಲ್ಲ, ವಿಜಯೇಂದ್ರ ಮಾತು ಯತ್ನಾಳ್ ಕೇಳ್ತಿಲ್ಲ. ಹೀಗಾಗಿ ಬಿಜೆಪಿಯಲ್ಲಿ ಮನೆ ಮೂರಲ್ಲ ನೂರು ಬಾಗಿಲಾಗಿದೆ ಎಂದು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
PublicNext
04/01/2025 03:19 pm