ಚಳ್ಳಕೆರೆ : ನಗರದ ನಗರಸಭೆ ಪೌರಯುಕ್ತರ ವಾಸದ ಗೃಹದ ಹಿಂಭಾಗದ ನಗರಸಭೆ ಸಿಬ್ಬಂದಿಯ ವಸತಿ ಗೃಹಗಳು ಶಿಥಲ ವ್ಯವಸ್ಥೆ ಗೆ ತಲುಪಿದ್ದು ಸುಮಾರು 7 ವಸತಿ ಗೃಹಗಳು ಈಗಾ ಕುಡುಕರ ಅಡ್ಡೆ ಹಾಗೂ ಅನೈತಿಕ ತಾಣವಾಗಿವೆ.
ಈ ವಸತಿ ಗೃಹಗಳ ಅಕ್ಕಪಕ್ಕದಲ್ಲಿ ಹಲವಾರು ಕುಟುಂಬಗಳು ವಾಸ ಮಾಡುತ್ತಿದ್ದು ಇಲ್ಲಿ ನಡೆಯುವ ಅನೈತಿಕ ಚಟುವಟಿಕೆಯಿಂದ ರೋಸಿ ಹೋಗಿದ್ದಾರೆ.
ಬಿದ್ದು ಹೋಗುವಂತಹ ವಸತಿ ಗೃಹಗಳ ಕುಡುಕರ ತಮ್ಮ ಅಡ್ಡೆಯನ್ನಾಗಿ ಮಾಡಿಕೊಂಡಿದ್ದು ಸಿಗೆಟ್, ಗಾಂಜಾ, ಮದ್ಯ ಸೇವನೆ ಮಾಡಿರುವ ಬಾಟಿಲಿಗಳು ರಾಶಿ ರಾಶಿ ಬಿದ್ದಿವೆ. ಶಿಥಿಲಗೊಂಡಿರುವ ವಸತಿಗೃಹಗಳನ್ನು ಕೆಡವಿ ಹೊಸ ವಸತಿಗೃಹಗಳನ್ನು ನಿರ್ಮಾಣ ಮಾಡಿ ನಗರಸಭೆ ಸಿಬ್ಬಂದಿಗಳಿಗೆ ಅನುಕೂಲ ಮಾಡಿಕೊಡಬೇಕಿದೆ ಎಂದು ನಗರದ ನಾಗರಿಕರು ಹಾಗೂ ಸುತ್ತಮುತ್ತಲಿನ ಮನೆಗಳ ನಿವಾಸಿಗಳು ಒತ್ತಾಯಿಸಿದ್ದಾರೆ.
PublicNext
04/01/2025 02:17 pm