ಬೆಂಗಳೂರು : ಹೊಸ ವರ್ಷದ ಹಿಂದಿನ ರಾತ್ರಿ ಪಾರ್ಟಿಯಲ್ಲಿ ಯುವತಿಗೆ ಬಲವಂತವಾಗಿ ಮದ್ಯಪಾನ ಮಾಡಿಸಿ ಅಸಭ್ಯ ವರ್ತನೆ ತೋರಿದ್ದ ಮ್ಯಾನೇಜರ್ ಹಾಗೂ ಇಬ್ಬರು ಸಹೋದ್ಯೋಗಿಗಳ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಬ್ರಿಗೇಡ್ ರಸ್ತೆಯ ಟೋಕೋ ಪಬ್ ನಲ್ಲಿ ವಿ5 ಕಂಪನಿ ಸಿಬ್ಬಂದಿ ಪಾರ್ಟಿ ಮಾಡಿದ್ರು. ಈ ವೇಳೆ ಕಂಪನಿ ಮ್ಯಾನೇಜರ್ ಹೇಮಂತ್ 22ವರ್ಷದ ಸಹೋದ್ಯೋಗಿಯನ್ನ ಏಕಾಂಗಿತಾಗಿ ಭೇಟಿ ಮಾಡಲು ಮ್ಯಾನಜ್ ಹೇಮಂತ್ ತಿಳಿಸಿದ್ರಂತೆ. ಭೇಟಿಗಾಗಿ ಸಂತ್ರಸ್ತ ಯುವತಿ ಟೋಕೋ ಪಬ್ ಗೆ ಹೋಗಿದ್ದಾಗ ಹೇಮಂತ್ ಸಂತ್ರಸ್ತೆಗೆ ಬಲವಂತವಾಗಿ ಮದ್ಯ ಕುಡಿಸಿದ್ರಂತೆ. ಸರ್ ಕೆಲಸ ಸಮಯ ಬೇಡ ಅಂದ್ರೂ ನಾನು ಮ್ಯಾನೇಜರ್ ನೋಡಿಕೊಳ್ಳುತ್ತೆನೆ ಎಂದು ಮದ್ಯ ಕುಡಿಸಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಖಾಸಗಿ ಕಂಪನಿಯ ಮಹಿಳಾ ಉದ್ಯೋಗಿ ಅಶೋಕನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.
22 ವರ್ಷದ ಸಂತ್ರಸ್ತೆ ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮೂವರು ಆರೋಪಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಿದ್ದಾರೆ. ಮದ್ಯದ ಅಮಲಿನಲ್ಲಿರುವ ವೇಳೆ ಅಸಭ್ಯವಾಗಿ ವರ್ತಿಸಿ ನನ್ನ ಮೈಮುಟ್ಟಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಅದೇ ದಿನ ರಾತ್ರಿ ಮ್ಯಾನೇಜರ್ ಹೇಮಂತ್. ಪುನೀತ್ ಅಜಿತ್ ಕಾರಿನಲ್ಲಿ ನಗರದ ಹಲವೆಡೆ ಸುತ್ತಾಡಿಸಿ ನಡುರಸ್ತೆಯಲ್ಲಿಯೇ ಬಿಟ್ಟು ಹೋಗಿದ್ದರು ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಈ ವೇಳೆ ತಾಯಿ ಕರೆ ಮಾಡಿದಾಗ ಮಗಳ ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದ ಆತಂಕಗೊಂಡಿದ್ದ ಅವರ ತಾಯಿ, ಮಗಳು ಕೆಲಸ ಮಾಡುತ್ತಿದ್ದ ಕಂಪನಿ ಬಳಿಯೇ ತೆರಳಿ ವಿಚಾರಿಸಿದ್ದರು.
ಇದಾದ ಬಳಿಕ ಸಂತ್ರಸ್ತೆ ತಾಯಿಗೆ ಸ್ವತಃ ಕರೆ ಮಾಡಿ ವಿಚಾರ ತಿಳಿಸಿ ಮನೆಗೆ ಯುವತಿ ತೆರಳಿದ್ದಾಳೆ. ನಂತರ ಮಾರನೆ ದಿನ ಅಶೋಕ ನಗರ ಠಾಣೆಗೆ ಬಂದು ಯುವತಿ ದೂರು ನೀಡಿದ್ದಾಳೆ. ಸದ್ಯ ಆರೋಪಿಗಳಿಗೆ ಅಶೋಕನಗರ ಪೊಲೀಸ್ರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.
Kshetra Samachara
04/01/2025 10:47 am