ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳ್ಮಣ್: ನಿಸ್ವಾರ್ಥ ಸೇವೆ ಮೂಲಕ ಜನಮನ್ನಣೆ - ಅನಂತ ರಾಜ್ ಭಟ್

ಮುಲ್ಕಿ: ಇತಿಹಾಸ ಪ್ರಸಿದ್ಧ ಬೆಳ್ಮಣ್ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಡೆಯುವ ಮಂಡಲ ಪೂಜೆಯ ಪ್ರಯುಕ್ತ ಕಳೆದ ಹಲವಾರು ವರ್ಷಗಳಿಂದ ತಮ್ಮ ಮನೆಯಲ್ಲಿ ಸಾವಿರಾರು ಮಂದಿಗೆ ಉಚಿತವಾಗಿ ಉಣಬಡಿಸುವ ವಾಸು ತಂತ್ರಿಗಳ ನಿಸ್ವಾರ್ಥ ಸೇವೆ ಶ್ಲಾಘನೀಯ ಎಂದು ವೇದಮೂರ್ತಿ ಅನಂತರಾಜ ಭಟ್ ಹೆಜ್ಮಾಡಿ ಹೇಳಿದ್ದಾರೆ.

ಬೆಳ್ಮಣ್ ಕೋಡಿ ಮಾರು ವಾಸು ತಂತ್ರಿಗಳ ನಿಸ್ವಾರ್ಥ ಸೇವೆ ಅಭಿನಂದಿಸಿ ಅವರು ಮಾತನಾಡಿದರು. ಕಳೆದ ಹಲವಾರು ವರ್ಷಗಳಿಂದ ದೇವಸ್ಥಾನದಲ್ಲಿ ನಡೆಯುವ ಮಂಡಲ ಪೂಜೆ ಪ್ರಯುಕ್ತ ತಮ್ಮ ಮನೆಯಲ್ಲಿ ಸಾವಿರಾರು ಮಂದಿಗೆ ಉಚಿತವಾಗಿ ಫಲಹಾರ ಸೇವೆ ಉಣಬಡಿಸುತ್ತಿದ್ದಾರೆ ವಾಸು ತಂತ್ರಿಗಳು. ಜನವರಿ 2ರಂದು ರಾತ್ರಿ ಸುಮಾರು 10,000 ಮಂದಿ ಊರ ಪರವೂರ ಭಕ್ತಾ ಅಭಿಮಾನಿಗಳಿಗೆ ಮಂಡಲ ಪೂಜೆ ಪ್ರಯುಕ್ತ ಫಲಹಾರದ ವ್ಯವಸ್ಥೆ ಕಲ್ಪಿಸಲಾಗಿದ್ದು, ಫಲಹಾರದ ಮೆನುವಿನಲ್ಲಿ ಉಪ್ಪಿನಕಾಯಿ, ಗೋಳಿ ಬಜೆ, ಚಟ್ನಿ, ಗೀ ರೈಸ್, ಕೂರ್ಮ, ರುಮಾಲ್ ರೋಟಿ, ಚನ್ನ ಮಸಾಲ, ಮೂಡೆ ಸಾಂಬಾರ್, ಮಸಾಲ ದೋಸೆ, ಫ್ರುಟ್ ಸಲಾಡ್, ಮೊಸರು ಅವಲಕ್ಕಿ, ಮಸಾಲಾ ಪುರಿ ಪಾನಿಪುರಿ ದೈ ಪೂರಿ, ಕೊನೆಗೆ ಪಾನ್ ಬೀಡಾ ಇದ್ದು ಸುಮಾರು 10,000 ಭಕ್ತರಿಗೆ ಉಚಿತವಾಗಿ ಫಲಹಾರ ವ್ಯವಸ್ಥೆ ಕಲ್ಪಿಸಿದ ವಾಸು ತಂತ್ರಿಗಳ ಉದಾರ ಮನೋಭಾವನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪುನೀತ್ ಕೃಷ್ಣ, "ಪಬ್ಲಿಕ್ ನೆಕ್ಸ್ಟ್" ಮುಲ್ಕಿ

Edited By : Manjunath H D
Kshetra Samachara

Kshetra Samachara

03/01/2025 04:08 pm

Cinque Terre

7.2 K

Cinque Terre

0