ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೊಲೀಸ್ ಗಸ್ತು ವಾಹನಕ್ಕೆ ಡಿಕ್ಕಿ ಹೊಡೆದ ಗೂಡ್ಸ್ ವಾಹನ : ತಪ್ಪಿದ ಅನಾಹುತ

ಬೆಳಗಾವಿ : ಪೊಲೀಸ್ ಗಸ್ತು ವಾಹನಕ್ಕೆ ಗೂಡ್ಸ್ ವಾಹನ ಡಿಕ್ಕಿ ಹೊಡೆದಿರುವ ಘಟನೆ ಬೆಳಗಾವಿ ತಾಲೂಕಿನ ಸುವರ್ಣಸೌಧ ಬಳಿ ನಡೆದಿದೆ.‌

ತಡರಾತ್ರಿ ಹಿರೇಬಾಗೇವಾಡಿ ಪೊಲೀಸ್ ಠಾಣೆಯ ರಾಷ್ಟ್ರೀಯ ಹೆದ್ದಾರಿ ಗಸ್ತು ವಾಹನಕ್ಕೆ ಹಿಂಬದಿಯಿಂದ ಗೂಡ್ಸ್ ವಾಹನ ಡಿಕ್ಕಿ ಹೊಡೆದಿದೆ.‌ ಹಲಗಾದಿಂದ ಹಿರೇಬಾಗೇವಾಡಿ ಕಡೆಗೆ ಪೊಲೀಸ್ ಗಸ್ತು ವಾಹನ ತೆರಳುತಿತ್ತು.

ಈ ವೇಳೆ ಗೂಡ್ಸ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಗಸ್ತು ವಾಹನಕ್ಕೆ ಡಿಕ್ಕಿ ಹೊಡೆದಿದೆ.‌ ಈ ಅಪಘಾತದಲ್ಲಿ ಎಎಸ್ಐ ನಾಗಣ್ಣವರ, ಚಾಲಕ ಹನುಮಂತ ಬಾರ್ಕಿಗೆ ಸಣ್ಣಪುಟ್ಟ ಗಾಯವಾಗಿದ್ದು, ಪೊಲೀಸ್ ಗಸ್ತು ವಾಹನದ ಹಿಂದಿನ ಭಾಗ ಸಂಪೂರ್ಣ ಜಖಂವಾಗಿದೆ. ಹಿರೇಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.‌

Edited By : Nirmala Aralikatti
Kshetra Samachara

Kshetra Samachara

03/01/2025 02:02 pm

Cinque Terre

6.12 K

Cinque Terre

0

ಸಂಬಂಧಿತ ಸುದ್ದಿ