ಬೆಳಗಾವಿ: ಟೈಯರ್ ಬ್ಲಾಸ್ಟ್ ಆಗಿ ಮುಂದೆ ಸಾಗುತ್ತಿದ್ದ ಬೈಕ್‌ಗೆ ಕಾರ್ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಟೋಲ್ ಗೇಟ್ ಬಳಿ ಸಂಭವಿಸಿದೆ.
ಬೆಳಗಾವಿ ತಾಲೂಕಿನ ಕುಕಡೋಳ್ಳಿ ಗ್ರಾಮದ ವ್ಯಕ್ತಿ ಹಿರೇಬಾಗೇವಾಡಿಯತ್ತ ಬರುತ್ತಿರುವಾಗ ಘಟನೆ ನಡೆದಿದೆ. ಕಾರಿನ ಟೈಯರ್ ಬ್ಲಾಸ್ಟ್ ಆದ ಹಿನ್ನಲೆ ಮುಂದೆ ಹೋಗುತ್ತಿದ್ದ ಬೈಕ್ ಸವಾರನಿಗೆ ಕಾರ್ ಡಿಕ್ಕಿ ಹೊಡೆದಿದೆ. ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂದಿನ ಭಾಗ ಸಂಪೂರ್ಣ ಜಖಂ ಆಗಿದೆ. ಜೊತೆಗೆ ಸ್ಥಳದಲ್ಲೇ ಬೈಕ್ ಸವಾರ ಮೃತಪಟ್ಟಿದ್ದಾನೆ.
ಧಾರವಾಡದಿಂದ ಬೆಳಗಾವಿ ಕಡೆ ಬರುತ್ತಿದ್ದ ಕಾರಿನ ಟೈಯರ್ ಬ್ಲಾಸ್ಟ್ ಆಗಿ ಚಾಲಕನ ನಿಯಂತ್ರಣ ತಪ್ಪಿದರಿಂದ ಈ ದುರ್ಘಟನೆ ಸಂಭವಿಸಿದೆ. ಕಾರು ಚಾಲಕ ಮಹಾರಾಷ್ಟ್ರದ ಮುಂಬೈ ಮೂಲದವನು ಎಂದು ತಿಳಿದು ಬಂದಿದೆ. ಹಿರೇಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಪೋಲಿಸರು ದೌಡಾಯಿಸಿದ್ದಾರೆ.
PublicNext
02/01/2025 05:22 pm