ಬೆಳಗಾವಿ: ಗ್ಯಾಸ್ ಪೈಪ್‌ಲೈನ್ ಸೋರಿಕೆಯಾಗಿ ಮನೆಗೆ ಬೆಂಕಿ ಹೊತ್ತಿಕೊಂಡಿರುವ ಘಟನೆ ಬೆಳಗಾವಿಯ ರಾಮತೀರ್ಥ ನಗರದಲ್ಲಿ ನಡೆದಿದೆ.
ನಿನ್ನೆ ಸಾಯಂಕಾಲ ಏಕಾಏಕಿ ಗ್ಯಾಸ್ ಪೈಪ್ ಲೀಕ್ ಆಗಿ ಬೆಂಕಿ ಹೊತ್ತಿಕೊಂಡಿದೆ. ಘಟನೆಯ ಭೀಕರತೆಯನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಇನ್ನು ರಾಧಿಕಾ ಎಂಬುವರ ಮನೆ ಮುಂದೆ ಈ ಘಟನೆ ನಡೆದಿದ್ದು, ಮನೆಯಲ್ಲಿದ್ದ ರಾಧಿಕಾ ಎಂಬುವರು ಮಗನ ಜೊತೆ ಮನೆ ಮಹಡಿ ಹತ್ತಿ ಪಕ್ಕದ ಮನೆಯ ಮಹಡಿಯಿಂದ ಜಂಪ್ ಮಾಡಿ ಹೊರ ಬಂದು ತಮ್ಮನ್ನ ತಾವೇ ಕಾಪಾಡಿಕೊಂಡಿದ್ದಾರೆ.
ಈ ಘಟನೆಯಿಂದ ಅಕ್ಕಪಕ್ಕದ ಮನೆಯಲ್ಲಿದ್ದ ಮಹಿಳೆಯರು ಬೆಚ್ಚಿಬಿದಿದ್ದು, ಮೇಘಾ ಗ್ಯಾಸ್ ಕಂಪನಿ ಸಿಬ್ಬಂದಿ ವಿರುದ್ಧ ಸ್ಥಳೀಯರ ಆಕ್ರೋಶ ಹೋರ ಹಾಕಿದ್ದಾರೆ. ಆಗಾಗ ಬಂದು ಪರಿಶೀಲನೆ ಮಾಡದೇ ಇದ್ದಿದ್ದರಿಂದ ಅನಾಹುತ ಸಂಭವಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
PublicNext
31/12/2024 09:35 am