ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಪೇಜಾವರ ಶ್ರೀಗಳ ಪಂಚಮ ಆರಾಧನೋತ್ಸವ

ಉಡುಪಿ: ರಾಷ್ಟ್ರ ಸಂತ, ಹಿಂದುತ್ವದ ಪ್ರತಿಪಾದಕ ದಲಿತ ಕೇರಿಗಳಿಗೆ ಭೇಟಿ ಕೊಡುವ ಮೂಲಕ ದೇಶದಲ್ಲಿ 60 ನೇ ದಶಕದಲ್ಲೇ ಸಂಚಲನ ಮೂಡಿಸಿದ್ದ ಪೇಜಾವರ ಶ್ರೀಗಳು ಬೃಂದಾವನಸ್ಥರಾಗಿ ಇಂದಿಗೆ ಐದು ವರ್ಷಗಳು ಕಳೆದವು.

ಈ ಹಿನ್ನೆಲೆಯಲ್ಲಿ ಉಡುಪಿಯ ಪೇಜಾವರ ಮಠದಲ್ಲಿ ವಿಶ್ವೇಶತೀರ್ಥ ಶ್ರೀಗಳ ಪಂಚಮ ಆರಾಧನೋತ್ಸವ ನಡೆಯಿತು. ಈ ವೇಳೆ ಸ್ವಾಮೀಜಿಗಳ ಭಾವಚಿತ್ರ ಮತ್ತು ಪಾದುಕೆ ಇಟ್ಟು ವಿಶೇಷ ಪೂಜೆ ಸಲ್ಲಿಸಲಾಯಿತು. ಮಠಕ್ಕೆ ಬರುವ ಭಕ್ತರಿಗೆ ಮಂತ್ರಾಕ್ಷತೆ, ವಿಶೇಷ ಪ್ರಸಾದ ವಿತರಿಸಲಾಯ್ತು.ವೃಂದಾವನಸ್ಥರಾದ ಪೇಜಾವರ ಶ್ರೀಗಳ ಶಿಷ್ಯಂದಿರು ಮತ್ತು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು.

Edited By : Suman K
Kshetra Samachara

Kshetra Samachara

03/01/2025 01:00 pm

Cinque Terre

3.48 K

Cinque Terre

0

ಸಂಬಂಧಿತ ಸುದ್ದಿ