ವಾಷಿಂಗ್ಟನ್: ಅಮೆರಿಕದ ನ್ಯೂ ಅರ್ಲಿನ್ಸ್‌ನಲ್ಲಿ ನ್ಯೂ ಇಯರ್ ಸಂಭ್ರಮಾಚರಣೆ ವೇಳೆ ಟ್ರಕ್ ನುಗ್ಗಿಸಿ 15 ಜನರ ಹತ್ಯೆಗೈದು, ಹಲವರನ್ನು ಗಾಯಗೊಳಿಸಿರುವ ಶಂಕಿತ ಶಂಸುದ್ದೀನ್ ಜಬ್ಬಾರ್ ಅಮೆರಿಕ ಸೇನೆಯಲ್ಲಿ 13 ವರ್ಷ ಕೆಲಸ ಮಾಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಂಕಿತ ಅಫ್ಗಾನಿಸ್ತಾನದಲ್ಲಿ ಸೇನೆ ಜಮಾವಣೆ ಸೇರಿ ಹಲವು ಸೇನಾ ಕಾರ್ಯಾಚರಣೆಗಳಲ್ಲಿ ಕಾರ್ಯನಿರ್ವಹಿಸಿದ್ದ ಎಂದು ತಿಳಿದುಬಂದಿದೆ. ಸದ್ಯ ಟ್ರಕ್ ನುಗ್ಗಿಸಿ 15 ಮಂದಿಯ ಹತ್ಯೆ ಮಾಡಲಾಗಿದ್ದು, ಘಟನೆಯ ಭಯಾನಕ ವಿಡಿಯೋ ವೈರಲ್ ಆಗಿದೆ.
ನ್ಯೂ ಓರ್ಲಿಯನ್ಸ್ ನಲ್ಲಿ ಜನ ಸಮೂಹ ಹೊಸ ವರ್ಷಾಚರಣೆ ಪಾರ್ಟಿಯ ಸಂಭ್ರಮದಲ್ಲಿದ್ದಾಗ ಟ್ರಕ್ ನುಗ್ಗಿಸಲಾಗಿತ್ತು. ಘಟನೆಯಲ್ಲಿ 15 ಮಂದಿ ಸಾವನ್ನಪ್ಪಿದ್ದು, 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.
ಟ್ರಕ್ ನಲ್ಲಿ ಐಸಿಸ್ ಧ್ವಜ, ಸ್ಪೋಟಕ ಸೇರಿ ಅನೇಕ ವಸ್ತುಗಳು ಪತ್ತೆಯಾಗಿವೆ. ಹೀಗಾಗಿ ದಾಳಿಯಲ್ಲಿ ಐಸಿಸ್ ಕೈವಾಡ ಇರುವ ಬಗ್ಗೆ ಅಮೆರಿಕ ಸಂಸ್ಥೆಗಳು ಮಾಹಿತಿ ನೀಡಿವೆ.
PublicNext
02/01/2025 04:09 pm