ಮುಲ್ಕಿ: ಯಾವುದೇ ನಿರೀಕ್ಷೆಯಿಲ್ಲದೆ ಪ್ರೀತಿಯಿಂದ ಸಹಬಾಳ್ವೆ ಮಾಡಿದರೆ ದೇವರ ರಾಜ್ಯಕ್ಕೆ ಸೇರಲು ಸಾಧ್ಯ ಎಂದು ಚರ್ಚ್ ಆಫ್ ಸೌತ್ ಇಂಡಿಯಾ ಕರ್ನಾಟಕ ಸದರ್ನ್ ಡಯಾಸಿಸಿನ ಬಿಸೋಪರಾದ ರೈಟ್ ರೆ. ಹೇಮಚಂದ್ರ ಹೇಳಿದರು.
ಅವರು ಹಳೆಯಂಗಡಿಯ ಸಿಎಸ್ಐ ಅಮ್ಮನ್ ಮೆಮೋರಿಯಲ್ ಚರ್ಚಿನಲಿ ನಡೆದ ಹೊಸ ವರ್ಷದ ಆರಾಧನೆಯಲ್ಲಿ ಭಾಗವಹಿಸಿ ಸಂದೇಶ ನೀಡಿದರು. ಆರಾಧನಾ ಯನ್ನು ಸಭಾ ಪಾಲಕ ರೇ. ಅಮೃತ್ ರಾಜ ಕೊಡೆ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಸತ್ಯವೇದ ಪರೀಕ್ಷೆಯಲ್ಲಿ ಉನ್ನತ ಸಾಧನೆಗೈದ ಹಲವರನ್ನು ಗೌರವಿಸಲಾಯಿತು.
ಸಭಾ ಪರಿಪಾಲನ ಸಮಿತಿಯ ಕಾರ್ಯದರ್ಶಿ ಲಾವಣ್ಯ ಕೋಟ್ಯಾನ್ ಸ್ವಾಗತಿಸಿದರು ಸಮಿತಿಯ ಆಸ್ಟಿನ್ ಕರ್ಕಡ, ಎಚ್ ವಸಂತ ಬರ್ನಾಡ್, ಜೇಮ್ಸ್ ಕರ್ಕಡ ಶರ್ಲಿ ಬಂಗೇರ,ಸಿಡ್ನಿ ಕರ್ಕಡ ಸಹಕರಿಸಿದ್ದರು.
PublicNext
02/01/2025 07:56 am