ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳ್ತಂಗಡಿ : ಹೊಸವರ್ಷಕ್ಕೆ ಪುಷ್ಪಾಲಂಕೃತಗೊಂಡ ಶ್ರೀಕ್ಷೇತ್ರ ಧರ್ಮಸ್ಥಳ - ಮಂಜುನಾಥ ಸ್ವಾಮಿಯ ದರ್ಶನಕ್ಕೆ ಭಕ್ತರ ದಂಡು

ಬೆಳ್ತಂಗಡಿ : ಹೊಸವರ್ಷವನ್ನು ಸ್ವಾಗತಿಸುವ ಸುಸಂದರ್ಭ ಬುಧವಾರ ಬೆಳಗ್ಗೆ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಆಲಯವನ್ನು ಪ್ರತೀವರ್ಷದಂತೆ ಭಕ್ತರು ವಿಶೇಷವಾಗಿ ಹೂವಿನ ಅಲಂಕಾರ ಮಾಡಿದ್ದಾರೆ.

ಬೆಂಗಳೂರಿನ ಟಿವಿಎಸ್‌ ಕಂಪೆನಿಯ ಉದ್ಯಮಿ ಗೋಪಾಲ್‌ ರಾವ್‌ ಹಾಗೂ ಆನಂದ ಮೂರ್ತಿ ಅವರ ತಂಡ ಧರ್ಮಸ್ಥಳದ ದೇವಸ್ಥಾನ, ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಬೀಡು, ಅನ್ನಛತ್ರ ಸಹಿತ ಮುಂಭಾಗ, ಒಳಾಂಗಣ, ಹೊರಾಂಗಣ, ಗೋಪುರ, ಮುಖಮಂಟಪವನ್ನು ಸಂಪೂರ್ಣ ಹೂ-ಹಣ್ಣುಗಳಿಂದ ಸಿಂಗರಿಸಿದ್ದಾರೆ.

ಡಿ.25ರಿಂದ 80 ಮಂದಿಯ ತಂಡವು ಸತತವಾಗಿ ಅಲಂಕಾರ ಕಾರ್ಯದಲ್ಲಿ ತೊಡಗಿದೆ. ಈ ಬಾರಿ ದೇವಸ್ಥಾನದ ಮುಂಭಾಗ ಆದಿಯೋಗಿಯ ಪ್ರತಿಮೆಯೊಂದಿಗೆ ಸಿಂಗಾರಗೊಳಿಸಲಾಗಿದೆ. 16 ವರ್ಷಗಳಿಂದ ಈ ತಂಡ ಅಲಂಕಾರ ಮಾಡುತ್ತಿದ್ದು, ಪ್ರಸಕ್ತ ವರ್ಷ 20ಲಕ್ಷ ರೂ. ವೆಚ್ಚದಲ್ಲಿ ಅಲಂಕರಿಸಲಾಗಿದೆ. ಸ್ವದೇಶಿ, ವಿದೇಶಿ ಹೂವುಗಳು, ಅಡಿಕೆ, ಭತ್ತದ ತೆನೆ, ಹೊಂಬಾಳೆ, ದಾಳಿಂಬೆ, ತೆಂಗಿನಕಾಯಿ, ಬಾಳೆಹಣ್ಣು, ಮೂಸಂಬಿ, ಕಬ್ಬು ಸಹಿತ 1 ಟನ್‌ ಹಣ್ಣು ಬಳಸಲಾಗಿದೆ. ದರ್ಶನ ಪಡೆಯುತ್ತಿರುವ ಭಕ್ತ ಸಾಗರ

ಹೊಸ ವರ್ಷದ ಹಿನ್ನೆಲೆಯಲ್ಲಿ ಬೆಂಗಳೂರು, ಮೈಸೂರು, ಹುಬ್ಬಳಿ ಸೇರಿ ಉತ್ತರ ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡಿನಿಂದಲೂ ಭಕ್ತರ ದಂಡು ಆಗಮಿಸುತ್ತಿದೆ.

Edited By : Nagesh Gaonkar
PublicNext

PublicNext

01/01/2025 08:43 pm

Cinque Terre

105.46 K

Cinque Terre

0

ಸಂಬಂಧಿತ ಸುದ್ದಿ