ಸೋಮವಾರಪೇಟೆ: ಈಗಾಲೇ ಹುತಾತ್ಮ ಯೋಧ ದಿವಿನ್ ಪಾರ್ಥಿವ ಶರೀರ ಹುಟ್ಟೂರು ಆಲೂರು ಸಿದ್ದಾಪುರದತ್ತ ಆಗಮಿಸುತ್ತಿದ್ದು, ಕುಶಾಲನಗರದಿಂದ ಆಲೂರು ಸಿದ್ದಾಪುರ ಸಾಗುವ ದಾರಿಯುದ್ದಕ್ಕೂ ವಿದ್ಯಾರ್ಥಿಗಳು ಸಾರ್ವಜನಿಕರಿಂದ ಪುಷ್ಪ ನಮನ ಸಲ್ಲಿಸಲಾಯಿತು.
ಯೋಧ ಪಳಂಗೋಟು ದಿವಿನ್ ಹುತಾತ್ಮರಾದ ಹಿನ್ನಲೆ ಕೊಡಗು ಜಿಲ್ಲೆ ಆಲೂರು ಸಿದ್ದಾಪುರ ಶೋಕ ಸಾಗರದಲ್ಲಿ ಮುಳುಗಿದ್ದು ಅಲೂರು ಸಿದ್ದಾಪುರ ಟೌನ್ ನಲ್ಲಿ ಬಂದ್ ಮಾಡಲಾಗಿದೆ. ಸ್ವಯಂ ಪ್ರೇರಿತರಾಗಿ ವರ್ತಕರು ಅಂಗಡಿ ಮುಂಗಟ್ಟುಗಳನ್ನ ಮುಚ್ಚುವ ಮೂಲಕ ಬಂದ್ ಗೆ ಬೆಂಬಲ ನೀಡಿದ್ದಾರೆ. ಇನ್ನೂ ಯೋಧನ ಅಂತಿಮ ದರ್ಶನಕ್ಕೆ ಹುಟ್ಟೂರಾದ ಆಲೂರು ಸಿದ್ದಾಪುರದ ಸರ್ಕಾರಿ ಶಾಲೆಯಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು, ಇಂದೇ ಸ್ವಗೃಹ ಮಾಲಂಬಿಯಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ.
PublicNext
01/01/2025 06:05 pm