ಸೋಮವಾರಪೇಟೆ: ಸೈನಿಕ ದಿವಿನ್ ಅವರ ವಿವಾಹ ಇನ್ನೆರಡು ತಿಂಗಳಿಗೆ ನಿಗದಿಯಾಗಿತ್ತು. ತಂದೆ ತೀರಿಕೊಂಡ ವರ್ಷದೊಳಗೆ ಮದುವೆಯಾಗಬೇಕೆಂದು ಕುಟುಂಬಸ್ಥರು ತೀರ್ಮಾನಿಸಿದ್ದರಿಂದ 2025ರ ಫೆಬ್ರವರಿ 23ರಂದು ವಿವಾಹ ನಿಶ್ಚಯವಾಗಿ ಆಮಂತ್ರಣ ಪತ್ರಿಕೆಯನ್ನೂ ಮುದ್ರಿಸಲಾಗಿತ್ತು. ಆದರೆ ದುರಾದೃಷ್ಟವಶಾತ್ ದಿವಿನ್ ಇಂದು ಸಾವನ್ನಪ್ಪಿದ್ದಾರೆ. ಘಟನೆ ನಡೆದ ದಿನದಿಂದಲೂ ಕುಟುಂಬಸ್ಥರು, ಸಂಬಂಧಿಕರು, ಸಾರ್ವಜನಿಕರು ದಿವಿನ್ ಶೀಘ್ರ ಗುಣಮುಖರಾಗಲೆಂದು ಹಲವಷ್ಟು ಪ್ರಾರ್ಥನೆ ಸಲ್ಲಿಸಿದ್ದರಾದರೂ ಕೂಡ ಯಾವುದೇ ಪ್ರಾರ್ಥನೆ ಫಲಿಸಲೆ ಯೋಧ ಸೇನಾ ಆಸ್ಪತ್ರೆಯಲ್ಲೆ ಕೊನೆಯುಸಿರೇಳೆದಿದ್ದಾರೆ.
ಪಳಂಗೋಟು ವಸಂತ ಪ್ರಕಾಶ್ ಹಾಗೂ ಜಲಜಾಕ್ಷಿ ದಂಪತಿಗೆ ಓರ್ವನೇ ಪುತ್ರನಿದ್ದು, ಆತನನ್ನು ಸೈನ್ಯಕ್ಕೆ ಸೇರಿಸುವ ಮೂಲಕ ದಂಪತಿ ದೇಶಪ್ರೇಮ ಮೆರೆದಿದ್ದರು. ಕೃಷಿಕರಾಗಿರುವ ವಸಂತ ಅವರು ಕಳೆದ ವರ್ಷವಷ್ಟೇ ಇಹಲೋಕ ತ್ಯಜಿಸಿದ್ದಾರೆ. ಆಲೂರು ಸಿದ್ದಾಪುರದಲ್ಲಿ ವಾಸವಿದ್ದ ಕುಟುಂಬ ಇತ್ತೀಚೆಗಷ್ಟೇ ಮಾಲಂಬಿಯಲ್ಲಿ ನೂತನ ಮನೆ ನಿರ್ಮಿಸಿ, ಅಲ್ಲಿಗೆ ಸ್ಥಳಾಂತರಗೊಂಡಿತ್ತು. ನೂತನ ಮನೆಯ ಗೃಹ ಪ್ರವೇಶ ನಡೆದ ಕೆಲ ಸಮಯದಲ್ಲೇ ವಸಂತ ಅವರು ಮರಣ ಹೊಂದಿದ್ದು, ತಾಯಿಯೋರ್ವರೇ ಮಾಲಂಬಿಯಲ್ಲಿ ನೆಲೆಸಿದ್ದರು. ದಿವಿನ್ ದೇಶ ರಕ್ಷಣೆಯಲ್ಲಿ ತೊಡಗಿದ್ದು ಇದೀಗ ಮಗನನ್ನೂ ಕಳೆದ ಕೊಂಡ ತಾಯಿ ತಬ್ಬಲಿಯಾಗಿದ್ದಾರೆ.
PublicNext
30/12/2024 08:32 am