ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾಪೋಕ್ಲುವಿನಲ್ಲಿ ವಾಹನದಟ್ಟಣೆ ನಿಯಂತ್ರಿಸಲು ವಾಹನ ಚಾಲಕರ, ವರ್ತಕರ ಸಭೆ

ನಾಪೋಕ್ಲು: ವಾಹನ ಚಾಲಕರು ಮತ್ತು ಮಾಲೀಕರು ತಮ್ಮ ವಾಹನಗಳಿಗೆ ಪಕ್ಕಾ ದಾ ಖಲಾತಿಗಳನ್ನು ಹೊಂದಿರಬೇಕು ಇಲ್ಲದಿದ್ದರೆ ಕಾನೂನು ಕ್ರಮಕ್ಕೆ ಬದ್ಧರಾಗಿ ಎಂದು ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ನಾಪೋಕ್ಲು ಪಟ್ಟಣದಲ್ಲಿ ಉಂಟಾಗುವ ವಾಹನದಟ್ಟಣೆ ನಿಯಂತ್ರಣ ಕುರಿತು ನಾಪೋಕ್ಲುವಿನ ಬಕಾಚಿ ರೆಸ್ಟೋರೆಂಟ್ ಸಭಾಂಗಣದಲ್ಲಿ ಪೊಲೀಸ್ ಇಲಾಖೆಯಿಂದ ಕರೆಯಲಾದ ಆಟೋ ಚಾಲಕರ ಮತ್ತು ವರ್ತಕರ ಸಭೆಯಲ್ಲಿ ಅವರು ಮಾತನಾಡಿದರು.

ಪಟ್ಟಣದಲ್ಲಿ ಆಟೋ ಚಾಲಾಯಿಸುವ ಪ್ರತಿಯೊಬ್ಬ ಚಾಲಕರು ಡ್ರೈವಿಂಗ್ ಲೈಸೆನ್ಸ್,ಸಮವಸ್ತ್ರ,ವಾಹನದ ಇನ್ಸೂರೆನ್ಸ್, ಸೇರಿದಂತೆ ಎಲ್ಲಾ ದಾಖಲೆಗಳನ್ನು ಹೊಂದಿರಬೇಕು. ಇಲ್ಲದವರು ಮುಂದೆ ಪರಿಶೀಲನೆ ವೇಳೆ ಸಿಕ್ಕಿಬಿದ್ದಲ್ಲಿ ಕಾನೂನು ಕ್ರಮಕ್ಕೆ ಬದ್ಧರಾಗಿರಬೇಕೆಂದು ಎಚ್ಚರಿಕೆ ನೀಡಿದರು.

ನಗರದಲ್ಲಿ ಆಟೋ ನಿಲ್ದಾಣಕ್ಕೆ ಸ್ಥಳಾವಕಾಶವನ್ನು ಗುರುತಿಸಲಾಗಿದೆ.ಪಟ್ಟಣದಲ್ಲಿ ರಸ್ತೆ ವಿಸ್ತೀರ್ಣ ಇಲ್ಲದಿದ್ದು ಇದರಿಂದ ಪ್ರತಿದಿನ ವಾಹನದಟ್ಟಣೆ ಉಂಟಾಗುತ್ತಿದೆ. ಆಟೋ ನಿಲ್ದಾಣಕ್ಕೆಪಂಚಾಯಿತಿ ಹಾಗೂ ಪೊಲೀಸ್ ಇಲಾಖೆ ಮುಖ್ಯರಸ್ತೆಯಲ್ಲಿ ತಾತ್ಕಾಲಿಕ ಸ್ಥಳವನ್ನು ಗುರುತಿಸಲಾಗಿದ್ದು ಶೀಘ್ರದಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು. ಪೊಲೀಸ್ ಇಲಾಖೆಯಿಂದ ಪಟ್ಟಣದ ಆಟೋಗಳಿಗೆ ಈ ಹಿಂದೆ ಎನ್ ಪಿ ಕೆ ನಂಬರ್ ಅಳವಡಿಸಿದ್ದು ಅದನ್ನು ಕೆಲವು ಚಾಲಕರು ದುರ್ಬಳಕೆ ಮಾಡಿರುವ ಬಗ್ಗೆ ಗಮನಕ್ಕೆ ಬಂದಿದೆ. ಆದ್ದರಿಂದ ಶೀಘ್ರದಲ್ಲಿ ಎಲ್ಲಾ ಆಟೋಗಳಿಗೆ ನೂತನ ಎನ್ ಪಿ ಕೆ ಪೋಲಿಸ್ ನಂಬರ್ ಅಳವಡಿಸಲಾಗುವುದು ಎಂದರು.ಪಟ್ಟಣದ ಎಲ್ಲೆಂದರಲ್ಲಿ ಅನಾವಶ್ಯಕವಾಗಿ ಆಟೋರಿಕ್ಷಾ ನಿಲ್ಲಿಸುವುದು, ಸುತ್ತಾಡಿ ವಾಹನ ದಟ್ಟಣೆಗೆ ಕಾರಣಕರ್ತರಾಗುತ್ತಿರುವುದು ಗಮನಕ್ಕೆ ಬಂದಿದೆ. ಮುಂದೆ ಅಂತವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

Edited By : PublicNext Desk
Kshetra Samachara

Kshetra Samachara

08/01/2025 05:46 pm

Cinque Terre

600

Cinque Terre

0

ಸಂಬಂಧಿತ ಸುದ್ದಿ