ಕುಶಾಲನಗರ: ಜಮ್ಮು ಕಾಶ್ಮೀರದಲ್ಲಿ ಸೇನಾ ವಾಹನ ಕಮರಿಗೆ ಬಿದ್ದು ಹುತಾತ್ಮರಾದ ಯೋಧ ದಿವಿನ್ ಪಾರ್ಥಿವ ಶರೀರ ನಿನ್ನೆ ರಾತ್ರಿಯೇ ಕೊಡಗಿನ ಕುಶಾಲನಗರಕ್ಕೆ ಆಗಮಿಸಿದ್ದು ಪಾರ್ಥಿವ ಶರೀರವನ್ನ ಕುಶಾಲನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿತ್ತು. ಬಳಿಕ ಇದೀಗ ಮೆರವಣಿಗೆ ಮೂಲಕ ಆಸ್ಪತ್ರೆಯಿಂದ ಕುಶಾಲನಗರ ಸರ್ಕಾರಿ ಶಾಲಾ ಮೈದಾನಕ್ಕೆ ತರಲಾಯಿತು. ಬಳಿಕ ಸರ್ಕಾರಿ ಶಾಲೆಯಲ್ಲಿ ಸಾರ್ವಜನಿಕರಿಗೆ ಅಂತಿಮದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಕುಶಾಲನಗರ ಜನತೆ ಯೋಧ ದಿವಿನ್ ಗೆ ಅಂತಿಮ ನಮನ ಸಲ್ಲಿಸಿದ್ರು. ಕುಶಾಲನಗರದಲ್ಲಿ ಅಂತಿಮ ದರ್ಶನದ ಬಳಿಕ ಹುಟ್ಟೂರು ಆಲೂರು ಸಿದ್ದಾಪುರಕ್ಕೆ ಸೇನಾ ವಾಹನದಲ್ಲೆ ಪಾರ್ಥಿವ ಶರೀರವನ್ನು ರವಾನಿಸಲಾಗುವುದು.
PublicNext
01/01/2025 11:32 am