ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು : ನ್ಯೂ ಇಯರ್ ಪಾರ್ಟಿ ವೇಳೆ ಕಾಫಿನಾಡಿನಲ್ಲಿ ಯುವಕರ ನಡುವೆ ಡಿಶುಂ ಡಿಶುಂ

ಚಿಕ್ಕಮಗಳೂರು : ಕಾಫಿನಾಡಿನಲ್ಲಿ ನ್ಯೂ ಇಯರ್ ಪಾರ್ಟಿ ವೇಳೆ ಕುಡಿದ ಮತ್ತಿನಲ್ಲಿ ನಗರದ ಕೆಂಪನಹಳ್ಳಿ ಹಾಗೂ ಅರವಿಂದ ನಗರದ ಯುವಕರು ಕ್ಷುಲ್ಲಕ ಕಾರಣಕ್ಕೆ ಬಡಿದಾಡಿಕೊಂಡಿದ್ದಾರೆ. ಈ ವೇಳೆ ಗಾಯಗೊಂಡವರನ್ನು ನಗರದ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆಂದು ಕರೆತಂದಾಗಲು ಮತ್ತೆ ಆಸ್ಪತ್ರೆ ಆವರಣದಲ್ಲಿ ಎಣ್ಣೆ ಕಿಕ್ ನಲ್ಲಿ ಎದ್ದು, ಬಿದ್ದು ಬೈಕ್ ಬೀಳಿಸಿಕೊಂಡು ಹೊಡೆದಾಡಿದ್ದಾರೆ.

ಈ ವೇಳೆ ಜಗಳ ಬಿಡಿಸಲು ಹೋದ ಆಂಬುಲೆನ್ಸ್ ಚಾಲಕನ ಮೇಲೂ ಯುವಕರು ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಸದ್ಯ ಬಡಿದಾಡಿಕೊಂಡಿದ್ದ ನಾಲ್ವರು ಯುವಕರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದು, ಚಿಕ್ಕಮಗಳೂರು ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಈ ಸಂಬಂಧ ಯಾವುದೇ ದೂರು ಪ್ರತಿ ದೂರು ದಾಖಲಾಗಿಲ್ಲ.

Edited By : Nagesh Gaonkar
PublicNext

PublicNext

01/01/2025 03:11 pm

Cinque Terre

51.28 K

Cinque Terre

0