ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಆ್ಯಂಬುಲೆನ್ಸ್ ನಲ್ಲಿ ಲಕ್ಷಾಂತರ ಮೌಲ್ಯದ ಕಾಪರ್ ಸಾಗಾಟ- ಮೂವರು ಖದೀಮರು ಅಂದರ್

ಚಿಕ್ಕಮಗಳೂರು : ಆ್ಯಂಬುಲೆನ್ಸ್ ನಲ್ಲಿ 88 ಲಕ್ಷ ಮೌಲ್ಯದ ಕಾಪರ್ ಸ್ಕ್ರಾಪ್ ಕಳವು ಮಾಡಿ ಸಾಗಿಸುತ್ತಿದ್ದ ಮೂವರು ಖತರ್ನಾಕ್ ಖದೀಮರನ್ನು ಚಿಕ್ಕಮಗಳೂರು ಟೌನ್ ಸ್ಟೇಷನ್ ಪೊಲೀಸರು ಬಂಧಿಸಿದ್ದಾರೆ.

ನಗರ ರಾಂಪುರ ಬಳಿ ಇರುವ ಕಾಪರ್ ಸಲ್ಫೇಟ್ ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಮೂವರು ಖದೀಮರು ಸುಮಾರು 16,320 ಕೆ.ಜಿ. ಕಾಪರ್ ಸ್ಕ್ರಾಪ್ ಕಳ್ಳತನ ಮಾಡಿದ್ದರು. ಈ ಕುರಿತು ಪ್ರಭಾಕರ್ ಎಂಬುವವರು ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಪೊಲೀಸರು , ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ದೇವರನವದಗಿ ಗ್ರಾಮದ ರಾಜಕುಮಾರ್, ಗೌರೀಶ್ ಹಾಗೂ ಚಿಕ್ಕಮಗಳೂರಿನ ಉಪಳ್ಳಿ ನಿವಾಸಿ ಮಹಮ್ಮದ್ ಜುನೈದ್ ಎಂಬ ಮೂವರು ಆರೋಪಿಗಳನ್ನು ಬಂಧಿಸಿ 88.21 ಲಕ್ಷ ಮೌಲ್ಯದ 12,425 ಕೆ.ಜಿ. ಕಾಪರ್ ಸ್ಕ್ರಾಪ್ ಮತ್ತು ಕೃತ್ಯಕ್ಕೆ ಬಳಸಿದ ಮಾರುತಿ ಓಮ್ನಿ ಆ್ಯಂಬುಲೆನ್ಸ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರ ಕಾರ್ಯಕ್ಕೆ ಚಿಕ್ಕಮಗಳೂರು ಎಸ್ಪಿ ವಿಕ್ರಂ ಅಮಟೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Edited By : Somashekar
PublicNext

PublicNext

27/12/2024 10:25 am

Cinque Terre

25.56 K

Cinque Terre

0

ಸಂಬಂಧಿತ ಸುದ್ದಿ