ಚಿಕ್ಕಮಗಳೂರು: ಕಾಂಗ್ರೆಸ್ಸಿಗರು ತುರ್ತು ಪರಿಸ್ಥಿತಿ ಮನಸ್ಥಿತಿಯಿಂದ ಹೊರಬರಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಹೇಳಿದ್ದಾರೆ. ನನಗೆ ಏನೂ ಆಗಿಲ್ಲ ಎಂಬ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆಗೆ ಕಿಡಿಕಾರಿರುವ ಅವರು 'ಶೀ ಇಸ್ ನಾಟ್ ಎ ಡಾಕ್ಟರ್' ನನಗೆ ಗಾಯ ಆಗಿ ರಕ್ತ ಬಂದಿರುವುದು ಜಗತ್ತೇ ನೋಡಿದೆ. ಗಾಯ ಆದ ಬಳಿಕವೂ 3-4 ಗಂಟೆ ಚಿಕಿತ್ಸೆ ಕೊಡಿಸಿಲ್ಲ.ಖಾನಾಪುರದಲ್ಲಿ ಗಾಯ ಆಗಿದ್ದು, ಚಿಕಿತ್ಸೆ ನೀಡಿದ್ದು ರಾಮದುರ್ಗ ದಲ್ಲಿ ಅವರ ತಪ್ಪು ಮುಚ್ವಿಕೊಳ್ಳಲು ಆ ತಾಯಿ ಸುಳ್ಳುಗಳ ಸರಮಾಲೆ ಹೆಣೆದಿದ್ದಾರೆ. ಸುಳ್ಳನ್ನ ಸೋಲಿಸಬಹುದು, ಸತ್ಯವನ್ನ ಸೋಲಿಸಲು ಆಗಲ್ಲ ಎಂದಿದ್ದಾರೆ.
ಜಯಮಾಲ ಮಂತ್ರಿ ಆದಾಗ ಈ ಮಹಾ ತಾಯಿ ಹೇಳಿದ ಮಾತು ಎಲ್ಲರಿಗೂ ಗೊತ್ತಿದೆ. ಕಣ್ಣೀರಿನಿಂದ ಬೆನಿಫಿಟ್ ಗಿಟ್ಡಿಸಿಕೊಳ್ಳಬಹುದು ಅಂದುಕೊಂಡಿರಬಹುದು.
ನನ್ನ ಪಿಎಗಳು ಲಂಚ ಕೇಳಿದ ಉದಾಹರಣೆ ಇಲ್ಲ, ಯಾರು ಸತ್ತಿಲ್ಲ, ಕೊಲೆಗಡುಕರು ಯಾರು, ಎಲ್ಲವನ್ನೂ ಹೇಳುವ ಅಗತ್ಯವಿಲ್ಲ ಎಂದು ಟಾಂಗ್ ನೀಡಿದ್ದಾರೆ. ನನ್ನ ಪಕ್ಕೆ, ಬೆನ್ನಿನಲ್ಲಿ 3-4 ಗುರುತುಗಳು ಇನ್ನೂ ಇವೆ,ಅವರ ಪಿಎ ಗೆ ಅಷ್ಟು ಸೊಕ್ಕು ಹೇಗೆ - ಎಲ್ಲಿಂದ ಬಂತು, ಆ ಸೊಕ್ಕಿಗೆ ಕಾರಣ ಯಾರು? ಗೂಂಡಾಗಳಿಗೆ ಸುವರ್ಣ ಸೌಧಕ್ಕೆ ಪಾಸ್ ಕೊಟ್ಟಿದ್ದು ಯಾರು ಎಂದು ಸಿಟಿ ರವಿ ಪ್ರಶ್ನಿಸಿದ್ದಾರೆ.
PublicNext
24/12/2024 01:15 pm