ಚಿಕ್ಕಮಗಳೂರು : ಆಟೋದಲ್ಲಿ ಗಾಂಜಾ ಇಟ್ಟುಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಾಳೂರು ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗದ ಮೂಲದ ಮೊಹಮ್ಮದ್ ಪರ್ವೀಜ್ ಹಾಗೂ ಶ್ರೀನಿವಾಸ ಬಂಧಿತ ಆರೋಪಿಗಳು. ಮೂಡಿಗೆರೆ ತಾಲೂಕಿನ ಬಾಳೂರಿನ ಬಾಸನ ಕುಡಿಗೆಯ ರಸ್ತೆಯಲ್ಲಿ ಆರೋಪಿಗಳು ಆಟೋ ನಿಲ್ಲಿಸಿಕೊಂಡಿದ್ದರು. ಈ ವೇಳೆ ಗಸ್ತು ತಿರುಗುತ್ತಿದ್ದ ಬಾಳೂರು ಸಬ್ ಇನ್ಸ್ಪೆಕ್ಟರ್ ದಿಲೀಪ್ ಕುಮಾರ್ ಹಾಗೂ ಸಿಬ್ಬಂದಿಗಳು ಅನುಮಾನಗೊಂಡು ತಪಾಸಣೆ ಮಾಡಿದಾಗ 195 ಗ್ರಾಂ ಗಾಂಜಾ ಸೊಪ್ಪು ಹಾಗೂ ಗಾಂಜಾ ಸೇದಲು ಬಳಸುವ ಚಿಲಮ್ ಪತ್ತೆಯಾಗಿದೆ. ಕೂಡಲೇ ಇಬ್ಬರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
PublicNext
30/12/2024 08:28 pm