ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊನೆಯ ಸೂರ್ಯಾಸ್ತವನ್ನ ಕಣ್ತುಂಬಿಕೊಂಡ ಪ್ರವಾಸಿಗರ ದಂಡು

ಮಡಿಕೇರಿ: 2024 ಸುರ್ಯಸ್ತಮ ನೋಡಿ ಗುಡ್ ಬಾಯ್ ಹೇಳುತ್ತಾ ನಾಳೆ ಹುಟ್ಟುವ ಸೂರ್ಯ ಜನರಿಗೆ ಒಳ್ಳೆಯದು ಮಾಡಲಿ ಹೊಸ ವರ್ಷ ಎಲ್ಲರಿಗೂ ಹೊಸತನ ನೀಡಲಿ ಎಂದು ಕೇಳುತ್ತಾ ವರ್ಷ ಕೊನೆಯ ಸೂರ್ಯದೇವನಿಗೆ ಕೊಡಗಿನ ಜನ ಗುಡ್ ಬೈ ಹೇಳಿದ್ರು.

ಇಂದು ಡಿಸೆಂಬರ್ 31 2024 ಕೊನೆಯ ದಿನ ಎಲ್ಲೆಲ್ಲೂ ಹೋಸ ವರ್ಷದ ನೀರಿಕ್ಷೆಯಲ್ಲಿ ಕಾತುರ ಕುಹಲದಿಂದ ಕಾಯುತ್ತಿದ್ದಾರೆ, ಹಬ್ಬದ ಸಂಭ್ರಮ ಸಡಗರ ಎಲ್ಲೆಲ್ಲೂ ಕಂಡುಬರುತ್ತಿದೆ. ಪ್ರಕೃತಿಯ ತವರು ಹಚ್ಚ ಹಸಿರಿನ ಬೆಟ್ಟ ಗುಡ್ಡಗಳು ಸೆರಿದಂತೆ ಸುಂದರ ಪ್ರವಾಸಿತಾಣಗಳನ್ನು ಮಡಿಲಲ್ಲಿ ಕಟ್ಟಿಕೊಂಡಿರೋ ಕೊಡಗಲಂತ್ತು ಜನರು ಹೊಸ ಆರಣೆಯ ಬರುವುಕೆಯ ಹರ್ಷದಲ್ಲಿ ತೆಲುತ್ತಿದ್ದಾರೆ. ಮಡಿಕೇರಿಯ ರಾಜಾಸೇಟಿನಲ್ಲಿ ವರ್ಷದ ಕೊನೆಯ ಸೂರ್ಯಸ್ತಮ ನೋಡಲು ಪ್ರವಾಸಿಗರ ದಂಡೆ ಸೇರಿತ್ತು. ಸಂಜೆಯಾಗುತ್ತಿಂದತೆ ಆಗಸದಲ್ಲಿ ಬಣ್ಣದ ಚಿತ್ತಾರ ಮುಡಿಸಿ ಬೆಟ್ಟಗುಡ್ಡ ನಡುವೆ ಮರೆಯಾಗುವ ರವಿಮಾಮನನ್ನು ಕೊನೆಯದಾಗಿ ಬೀಳ್ಕೊಟ್ಟ ಪ್ರವಾಸಿಗರು ಖುಷಿಯಿಂದ ಕೂಗಾಡಿದರು. ಮೋಡದ ಮರೆಯಲ್ಲಿ ಕೆಂಪು ಸುರ್ಯನಾಗಿ ಕಂಗೋಳಿಸುತ್ತಾ ದೃಶ್ಯಕಾವ್ಯವನ್ನು ಸೃಷ್ಟಿಸಿದ ನೇಸರ ಇಂದು ವಿಶೇಷವಾಗಿ ಆಗಸದಲ್ಲಿ ಮೂಡಿಸಿ ಜನರಿಗೆ ಬೈ ಬೈ ಹೇಳಿದ ರೀತಿಯ ಕ್ಷಣ ಆದ್ಬುತವಾಗಿತ್ತು. ಜನರಂತ್ತು ಹೊಸ ವರ್ಷದ ನಿರಿಕ್ಷೇಯಲ್ಲಿ ಹೊಸವರ್ಷದ ಶುಭಾಶಯ ಕೋರುತ್ತ ಎಂಜಾಯ್ ಮಾಡಿದರು.ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಸಹಾಸ್ರಾರು ಪ್ರಾವಾಸಿಗರು ವರ್ಷದ ಕೊನೆ ಸೂರ್ಯಸ್ತಮವನ್ನು ಆತ್ಮಿಯವಾಗಿ ಬೀಳ್ಕೋಡಲೆಂದು ತಮ್ಮ ಕ್ಯಾಮ ರಗಳಲ್ಲಿ ಸೆರೆಹಿಡಿದು, ಸೂರ್ಯಸ್ತಮದ ಕೊನೆಯ ಕ್ಷಣಗಳನ್ನು ಖುಷಿ ಖುಷಿಯಿಂದ ಹಂಚಿಕೊಂಡರು. 2024 ರ ವರ್ಷಕ್ಕೆ ವಿದಾಯ ಹೇಳಿ 2025ರ ಹೋಸವರ್ಷದ ನೇಸರನ ನಿರೀಕ್ಷೇಯಲ್ಲಿ ಹೋರನೆಡೆದರು.

Edited By : PublicNext Desk
Kshetra Samachara

Kshetra Samachara

31/12/2024 09:53 pm

Cinque Terre

360

Cinque Terre

0