ಮಡಿಕೇರಿ: 2024 ಸುರ್ಯಾಸ್ತಮ ನೋಡಿ ಗುಡ್ ಬಾಯ್ ಹೇಳುತ್ತಾ ನಾಳೆ ಹುಟ್ಟುವ ಸೂರ್ಯ ಜನರಿಗೆ ಒಳ್ಳೆಯದು ಮಾಡಲಿ. ಹೊಸ ವರ್ಷ ಎಲ್ಲರಿಗೂ ಹೊಸತನ ನೀಡಲಿ ಎಂದು ಕೇಳುತ್ತಾ ವರ್ಷದ ಕೊನೆಯ ಸೂರ್ಯದೇವನಿಗೆ ಕೊಡಗಿನ ಜನ ಗುಡ್ ಬೈ ಹೇಳಿದ್ರು.
ಇಂದು ಡಿಸೆಂಬರ್31, 2024ಕೊನೆಯ ದಿನ ಎಲ್ಲೆಲ್ಲೂ ಹೋಸ ವರ್ಷದ ನೀರಿಕ್ಷೆಯಲ್ಲಿ ಕಾತುರ ಕುಹಲದಿಂದ ಕಾಯುತ್ತಿದ್ದಾರೆ, ಹಬ್ಬದ ಸಂಭ್ರಮ ಸಡಗರ ಎಲ್ಲೆಲ್ಲೂ ಕಂಡುಬರುತ್ತಿದೆ. ಪ್ರಕೃತಿಯ ತವರು ಹಚ್ಚ ಹಸಿರಿನ ಬೆಟ್ಟ ಗುಡ್ಡಗಳು ಸೇರಿದಂತೆ ಸುಂದರ ಪ್ರವಾಸಿತಾಣಗಳನ್ನು ಮಡಿಲಲ್ಲಿ ಕಟ್ಟಿಕೊಂಡಿರೋ ಕೊಡಗಿನಲ್ಲಂತೂ ಜನರು ಹೊಸ ವರ್ಷ ಬರುವಿಕೆಯ ಹರ್ಷದಲ್ಲಿ ತೇಲುತ್ತಿದ್ದಾರೆ. ಮಡಿಕೇರಿಯ ರಾಜಾಸೀಟ್‌ನಲ್ಲಿ ವರ್ಷದ ಕೊನೆಯ ಸೂರ್ಯಾಸ್ತಮ ನೋಡಲು ಪ್ರವಾಸಿಗರ ದಂಡೇ ಸೇರಿತ್ತು.
ಸಂಜೆಯಾಗುತ್ತಿಂದತೆ ಆಗಸದಲ್ಲಿ ಬಣ್ಣದ ಚಿತ್ತಾರ ಮುಡಿಸಿ ಬೆಟ್ಟಗುಡ್ಡ ನಡುವೆ ಮರೆಯಾಗುವ ರವಿಮಾಮನನ್ನು ಕೊನೆಯದಾಗಿ ಬೀಳ್ಕೊಟ್ಟ ಪ್ರವಾಸಿಗರು ಖುಷಿಯಿಂದ ಕೂಗಾಡಿದರು. ಮೋಡದ ಮರೆಯಲ್ಲಿ ಕೆಂಪು ಸುರ್ಯನಾಗಿ ಕಂಗೊಳಿಸುತ್ತಾ ದೃಶ್ಯಕಾವ್ಯವನ್ನು ಸೃಷ್ಟಿಸಿದ ನೇಸರ ಇಂದು ವಿಶೇಷವಾಗಿ ಆಗಸದಲ್ಲಿ ಮೂಡಿಸಿ ಜನರಿಗೆ ಬೈ ಬೈ ಹೇಳಿದ ರೀತಿಯ ಕ್ಷಣ ಆದ್ಭುತವಾಗಿತ್ತು. ಜನರಂತೂ ಹೊಸ ವರ್ಷದ ನಿರೀಕ್ಷೆಯಲ್ಲಿ ಹೊಸವರ್ಷದ ಶುಭಾಶಯ ಕೋರುತ್ತ ಎಂಜಾಯ್ ಮಾಡಿದರು. ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಸಹಾಸ್ರಾರು ಪ್ರವಾಸಿಗರು ವರ್ಷದ ಕೊನೆ ಸೂರ್ಯಸ್ತಮವನ್ನು ಆತ್ಮಿಯವಾಗಿ ಬೀಳ್ಕೊಡಲೆಂದು ತಮ್ಮ ಕ್ಯಾಮರಾಗಳಲ್ಲಿ ಸೆರೆಹಿಡಿದು, ಸೂರ್ಯಸ್ತಮದ ಕೊನೆಯ ಕ್ಷಣಗಳನ್ನು ಖುಷಿ ಖುಷಿಯಿಂದ ಹಂಚಿಕೊಂಡರು. 2024ರ ವರ್ಷಕ್ಕೆ ವಿದಾಯ ಹೇಳಿ 2025ರ ಹೊಸವರ್ಷದ ನೇಸರನ ನಿರೀಕ್ಷೆಯಲ್ಲಿ ಹೊರನಡೆದರು.
PublicNext
31/12/2024 10:13 pm