ಕೊಡಗು: ದೇಶದಾದ್ಯಂತ ಹೊಸ ವರ್ಷಾಚರಣೆಯ ಸಂಭ್ರಮ ಮನೆಮಾಡಿದ್ದು, 2024 ನ್ನು ಬೀಳ್ಕೊಟ್ಟು 2025 ನ್ನು ಬರ ಮಾಡಿಕೊಳ್ಳು ನಾಡಿನ ಜನತೆ ಕಾತುರತೆಯಿಂದ ಕಾಯುತ್ತಿದೆ. ಇದಕ್ಕೆ ಕೊಡಗು ಜಿಲ್ಲೆ ಕೂಡ ಹೊರತಾಗಿಲ್ಲ. ಈಗಾಲೇ ಮಂಜಿನ ನಗರಿಯತ್ತ ಪ್ರವಾಸಿಗರ ದಂಡೆ ಹರಿದು ಬಂದಿದ್ದು ಹೋಂ ಸ್ಟೇ ರೆಸಾರ್ಟ್ ಗಳಲ್ಲಿ ಸೆರಿಕೊಂಡಿದ್ದಾರೆ.
ಕಳೆದ 15 ದಿನಗಳಿದಂಲೇ ಕೊಡಗಿನ ಹೋಮ್ ಸ್ಟೇ, ರೆಸಾರ್ಟ್‌ಗಳು ಬಹುತೇಕ ಬುಕ್ ಆಗಿದ್ದು, ಕೊಡಗಿನ ಪ್ರವಾಸಿತಾಣಗಳು ಕೂಡ ಪ್ರವಾಸಿಗರಿಂದ ಗಿಜಿಗುಡುತ್ತಿದೆ. ಕೊಡಗಿನಲ್ಲಿ ಎಲ್ಲಿ ನೋಡಿದ್ರು ಪ್ರವಾಸಿಗರೆ ಕಂಡು ಬರುತ್ತಿದ್ದಾರೆ. ಕೊಡಗಿನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರೋದ್ರಿಂದ ಪ್ರವಾಸೋದ್ಯಮ ಅವಲಂಬಿತರು ಕೊಂಚ ನಿರಾಳಾರಾಗಿದ್ದಾರೆ. ಪ್ರವಾಸಿಗರು ಮಂಜಿನ ನಗರಿಯತ್ತ ತಂಡೊಪ್ಪ ತಂಡವಾಗಿ ಆಗಮಿಸಿರೋದ್ರಿಂದ ಮಡಿಕೇರಿ ಜನತೆಗೆ ಟ್ರಾಫೀಕ್ ಕಿರಿ ಕಿರಿ ಅನುಭವಿಸುವಂತಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಿದೆ.
PublicNext
31/12/2024 08:06 pm