ಬ್ರಹ್ಮಾವರ: ಶ್ರೀ ಬ್ರಹ್ಮಲಿಂಗ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನ ಸಾಲಿಕೇರಿಯಲ್ಲಿ ಶನಿವಾರ ಶ್ರೀ ವೀರಭದ್ರ ಯಕ್ಷಗಾನ ಕಲಾಸಂಘ ಸಾಲಿಕೇರಿ ಇದರ ವಿದ್ಯಾರ್ಥಿ ಸದಸ್ಯರಿಂದ ಪೆರ್ಡೂರು ರಘುರಾಮ ಮಲ್ಯ ವಿರಚಿತ ಪ್ರತೀಶ್ ಕುಮಾರ್ ನಿರ್ದೇಶನದಲ್ಲಿ ರಾಣಿ ಶಶಿಪ್ರಭೆ ಯಕ್ಷಗಾನ ಶನಿವಾರ ರಾತ್ರಿ ದೇವಸ್ಥಾನದ ವಠಾರದಲ್ಲಿ ಜರುಗಿತು.
ಭಾನುವಾರ ಬೆಳಿಗ್ಗೆ ದೇವಸ್ಥಾನದಲ್ಲಿನಾನಾ ಭಾಗದ ಭಕ್ತರಿಂದ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ ಜರುಗಿತು.ದೇವಸ್ಥಾನದ ಆಡಳಿತ ಮೋಕ್ತೇಸರ ಸುರೇಶ್ ಶೆಟ್ಟಿಗಾರ್ ಇನ್ನಿತರ ಪಧಾಧಿಕಾರಿಗಳು ಉಪಸ್ಥಿತರಿದ್ದರು.
ತಂತ್ರಿಗಳು, ಅರ್ಚಕರು, ವಾರಂಬಳ್ಳಿಯವರು, ಹೆಗ್ಡೆಯವರು, ಸೇವಾ ಸಮಿತಿ,ಅಭಿವೃದ್ಧಿ ಟ್ರಸ್ಟ್ ಆರು ಮಾಗಣೆ, ಏಳು ಗ್ರಾಮದ ಹತ್ತು ಸಮಸ್ಥರುಈ ಸಂದರ್ಭ ಉಪಸ್ಥಿತರಿದ್ದರು.
Kshetra Samachara
31/12/2024 07:45 am