ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಹೆಜ್ಜೆಹೆಜ್ಜೆಗೂ ಸಿಸಿಟಿವಿ ನಿಗಾ, 6 ಹೈಟೆಕ್ ಡ್ರೋನ್‌ಗಳ ಹಾರಾಟ - ಬಾಲ ಬಿಚ್ಚಿದ್ರೆ ಖಾಕಿ ಕ್ವಿಕ್ ಆಕ್ಷನ್!

ಬೆಂಗಳೂರು : 2024ಕ್ಕೆ ಗುಡ್ ಬೈ ಹೇಳಿ 2025 ಅನ್ನು ಸ್ವಾಗತ ಮಾಡಿಕೊಳ್ಳೋಕೆ ಇನ್ನು ಒಂದೇ ದಿನ ಬಾಕಿ ಇದೆ. ಸಿಲಿಕಾನ್ ಸಿಟಿ ಬೆಂಗಳೂರು ನ್ಯೂ ಇಯರ್ ಸಂಭ್ರಮಾಚರಣೆಗೆ ಸಜ್ಜಾಗುತ್ತಿದೆ. ಚರ್ಚ್ ಸ್ಟ್ರೀಟ್, ಬ್ರಿಗೇಡ್ ರೋಡ್, ಎಂ.ಜಿ ರಸ್ತೆಗಳಲ್ಲಿ ಈಗಾಗಲೇ ಲೈಟಿಂಗ್ಸ್ ಜಗಮಗಿಸುತ್ತಿದ್ದು, ಇದೇ ಮೊದಲ ಬಾರಿಗೆ ಅತಿ ಹೆಚ್ಚು ಸಿಸಿಟಿವಿಗಳನ್ನ ಅಳವಡಿಸಲಾಗಿದೆ.

ಎಸ್‌..., ನ್ಯೂ ಇಯರ್ ಸೆಲೆಬ್ರೇಷನ್‌ನಲ್ಲಿ ನಿಮ್ಮ ಮೇಲೆ ಗಲ್ಲಿಗಲ್ಲಿಯಲ್ಲೂ ನಿಗಾವಹಿಸುತ್ವೆ ಹೈಟೆಕ್ ಸಿಸಿ ಕ್ಯಾಮರಾಗಳು, ಇನ್ನು ಹೆಜ್ಜೆಹೆಜ್ಜೆಗೂ ಸಿಸಿಟಿವಿ ನಿಗಾ ಮತ್ತು ಆರು ಡ್ರೋನ್‌ಗಳ ಹಾರಾಟ ಮಾಡಲಿದ್ದು, ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಪ್ರತಿಯೊಬ್ಬರ ಚಲನವಲನವು ಚಲನವಲನವು ಎಲ್‌ಇಡಿ ಸ್ಕ್ರೀನ್‌ಗಳಲ್ಲಿ ಕಾಣತೊಡಗುತ್ತೆ ಹುಷಾರ್..!

ಈಗಾಗಲೇ 800 ಹೈಟೆಕ್ ಸಿಸಿ ಕ್ಯಾಮೆರಾಗಳ ಪಾಲಿಕೆ ಅಳವಡಿಕೆ ಮಾಡುತ್ತಿದ್ದು. ಬ್ರಿಗೇಡ್ ರೂಟ್ ಮತ್ತು ಚೌಕ್ ಸ್ಟ್ರೀಟ್ ನಲ್ಲಿ ಅತಿ ಹೆಚ್ಚು ಸಿಸಿ ಕ್ಯಾಮೆರಾಗಳನ್ನ ಸೆಟ್‌ ಮಾಡಲಾಗುತ್ತದೆ. ಕಳೆದ ಎರಡು ವರ್ಷದಿಂದ 250 ರಿಂದ 300 ಸಿಸಿಟಿವಿ ಅಳವಡಿಸಿದ್ದ ಪೊಲೀಸರು, ಈ ಬಾರಿ ಹೆಚ್ಚಿನ ಜನ ಸೇರುವ ಹಿನ್ನೆಲೆ 800ಕ್ಕೂ ಅಧಿಕ ಕ್ಯಾಮರಾಗಳನ್ನ ಅಳವಡಿಕೆ ಅಳವಡಿಸಿದ್ದಾರೆ.

ಬ್ರಿಗೇಡ್ ರೋಡ್‌ನ ಎರಡೂ ಬದಿಯ ವಿದ್ಯುತ್ ಕಂಬಗಳಿಗೆ ನಾಲ್ಕು ಸಿಸಿ ಕ್ಯಾಮೆರಾ ಹಾಗೂ ಚರ್ಚ್ ಸ್ಟ್ರೀಟ್‌ನ ಗಲ್ಲಿ ಗಲ್ಲಿಯನ್ನು ಒಂದೇ ಕಡೆ ಕುಳಿತು ನೋಡುವ ವಾರ್ ರೂಂ ವ್ಯವಸ್ಥೆ ಮಾಡಲಾಗಿದೆ. ಸಿಸಿಟಿವಿ ಗಮನೀಡಲೆಂದೆ ಎರಡು ಸ್ಪೆಷಲ್ ಟೀಂ ರಚನೆ ಮಾಡಲಾಗಿದ್ದು, ಫೀಲ್ಡ್ ನಲ್ಲಿರೋ ಸಿಬ್ಬಂದಿಗೆ ಆ ಕ್ಷಣದ ಎಲ್ಲಾ ಮಾಹಿತಿ ತಲುಪುತ್ತದೆ. ಪೊಲೀಸರೂ ಸಿಸಿಟಿವಿ ದೃಶ್ಯಗಳನ್ನು ಗಮನಿಸಲು ಐದು ಬೃಹತ್ ಎಲ್‌ಇಡಿ ಸ್ಕ್ರೀನ್‌ಗಳ ವ್ಯವಸ್ಥೆ ಮಾಡಿದೆ.

ಒಟ್ಟಾರೆ ಈ ಬಾರಿ ನ್ಯೂ ಇಯರ್ ಸೆಲೆಬ್ರೇಷನ್‌ಗೆ ಹೆಚ್ಚು ಜನ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ. ನಶೆ ಅಮಲಿನಲ್ಲಿ ಸ್ವಲ್ಪ ಬಾಲ ಬಿಚ್ಚಿದ್ರೂ ಪೊಲೀಸರು ಕ್ವಿಕ್ ಆಕ್ಷನ್ ತೆಗೆದುಕೊಳ್ಳಲಿದ್ದಾರೆ ಹಾಗಾಗಿ ಎಚ್ಚರದಿಂದ ಹೊಸ ವರ್ಷ ಆಚರಿಸಿ ಹಾಗೂ ಸ್ವಚ್ಛತೆ ಕಾಪಾಡಿ ಅನ್ನೋದು ಖಾಕಿ ಸೂಚನೆಯಾಗಿದೆ.

Edited By : Suman K
PublicNext

PublicNext

30/12/2024 07:31 pm

Cinque Terre

49.27 K

Cinque Terre

1

ಸಂಬಂಧಿತ ಸುದ್ದಿ