ಬೆಂಗಳೂರು : ಡಿಕೆ ಸುರೇಶ್ ತಂಗಿ ಹೆಸರಿನಲ್ಲಿ ಐಶ್ವರ್ಯಗೌಡಳಿಂದ ವಂಚನೆ ಪ್ರಕರಣದಲ್ಲಿ ಚಂದ್ರಾಲೇಔಟ್ ಪೊಲೀಸ್ರು ಮೂರು ಐಷಾರಾಮಿ ಕಾರಿಗಳನ್ನ ಸೀಜ್ ಮಾಡಿದ್ದಾರೆ.
ಚಂದ್ರಾಲೇಔಟ್ ಪ್ರಕಣದಲ್ಲಿ ಪೊಲೀಸರು ಐಶ್ವರ್ಯ ಮನೆ ಮೇಲೆ ದಾಳಿ ನಡೆಸಿದ್ರು. ಈ ವೇಳೆ ಐಶ್ವರ್ಯ ಪತಿ ಹರೀಶ್ ಹೆಸರಿನಲ್ಲಿದ್ದ ಆಡಿ, ಫಾರ್ಚ್ಯೂನರ್ ,ಬಿಎಂ ಡಬ್ಲ್ಯು ಕಂಪನಿಯ ಮೂರು ಐಷಾರಾಮಿ ಕಾರುಗಳು ಸೀಜ್ ಮಾಡಿದ್ದಾರೆ KA01MY8585 ನಂಬರಿನ ಆಡಿ, KA1MB8555 ಬಿಎಂಡಬ್ಲ್ಯೂ ಹಾಗೂ KA05NL3567 ಫಾರ್ಚುನರ್ ಕಾರುಗಳು ಸೀಜ್ ಮಾಡಿದ್ದಾರೆ.
ಇನ್ನೂ ಮನೆಯಲ್ಲಿ ಸುಮಾರು 29ಕೆಜಿ ಬೆಳ್ಳಿ ವಸ್ತುಗಳು ಮನೆಯಲ್ಲಿ ಪತ್ತೆಯಾಗಿದ್ದು, ಹಲವು ಡಾಕ್ಯುಮೆಂಟ್ ಪತ್ತೆಯಾಗಿದೆ. ಪೊಲೀಸ್ರ ಅನುಮಾನದ ಪ್ರಕಾರ ಮನೆಯಲ್ಲಿ ನಗದು ಹಾಗೂ ಚಿನ್ನದ ವಸ್ತುಗಳನ್ನ ಐಶ್ವರ್ಯ ಬೇರೆಡೆ ಸಾಗಿಸಿರುವ ಅನುಮಾನ ವ್ಯಕ್ತವಾಗಿದೆ.
PublicNext
02/01/2025 01:02 pm