ಬೆಂಗಳೂರು: ಹೊಸ ವರ್ಷ ಹಿನ್ನೆಲೆ ಕಮಿಷನರ್ ದಯಾನಂದ್ ನಗರದ ಡಿಸಿಪಿ, ಮತ್ತು ಹಿರಿಯ ಅಧಿಕಾರಿಗಳಿಗೆ ಹೊಸ ಮೊಬೈಲ್ ಫೋನ್ ಗಿಫ್ಟ್ ನೀಡಿದ್ದಾರೆ. ಇಂದು ಎಲ್ಲಾ ಅಧಿಕಾರಿಗಳನ್ನ ಕಚೇರಿಗೆ ಕರೆಯಿಸಿ ಮೊಬೈಲ್ ಫೋನ್ ಗಿಫ್ಟ್ ನೀಡಿದ್ರು.
ಆದ್ರೆ ಮೊಬೈಲ್ ಫೋನ್ ಗಿಫ್ಟ್ ಪಡೆದ ಅಧಿಕಾರಿಗಳಿಗೆ ಖುಷಿಗಿಂತ ಹೆಚ್ಚಾಗಿ ಟೆನ್ಷನ್ ಶುರುವಾಗಿದೆ. ಯಾಕಂದ್ರೆ ಡಿಸಿಪಿ ಮತ್ತು ಮೇಲ್ದರ್ಜೆ ಅಧಿಕಾರಿಗಳ ಜಿಪಿಎಸ್ ಟ್ರ್ಯಾಕರ್ ಈ ಮೊಬೈಲ್ ಫೋನ್‌ನಲ್ಲಿ ಅಳವಡಿಕೆಯಾಗಿದೆ. ಇನ್ಮುಂದೆ ಡಿಸಿಪಿ ಗಳು ಹಾಗೂ ಮೇಲಾಧಿಕಾರಿಗಳು ಯಾವುದೇ ಘಟನೆ ಆದಾಗ ಎಷ್ಟು ಗಂಟೆಗೆ ಸ್ಥಳಕ್ಕೆ ಹೋಗ್ತಾರೆ ಯಾವ ಸಮಯದಲ್ಲಿ ಎಲ್ಲಿರ್ತಾರೆ ಅನ್ನೋದನ್ನ ಕಮಾಂಡ್ ಸೆಂಟರ್‌ನಿಂದ ವೀಕ್ಷಿಸಬಹುದಾಗಿದೆ.
ಇಲಾಖೆಯಿಂದ ನೀಡಲಾಗಿರುವ ಸರ್ಕಾರಿ ಮೊಬೈಲ್ ಫೋನ್ ನಂಬರ್ ಇದೇ ಮೊಬೈಲ್ ಫೋನ್‌ನಲ್ಲಿ ಬಳಸುವಂತೆ ಸೂಚನೆ ನೀಡಲಾಗಿದ್ಯಂತೆ. ಇನ್ನೂ ಮೊಬೈಲ್ ಫೋನ್‌ಗಳು ಅಧಿಕಾರಿಗಳು ವರ್ಗಾವಣೆಯಾದ ಬಳಿಕ ಮುಂಬರುವ ಅಧಿಕಾರಿಗೆ ಇದೇ ಮೊಬೈಲ್ ಫೋನ್ ಹಸ್ತಾಂತರ ಮಾಡಲಾಗುತ್ತಂತೆ.
PublicNext
02/01/2025 08:28 pm